Advertisement

ಅಭಿಮಾನಿಗಳ ಜೊತೆ ರಚಿತಾ ಬರ್ತ್‌ಡೇ

11:43 AM Oct 04, 2022 | Team Udayavani |

ಕೋವಿಡ್‌ನಿಂದ ಹುಟ್ಟುಹಬ್ಬ ಆಚರಿಸಿದ ನಟ-ನಟಿಯರು ಈಗ ನಿಧಾನವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅನೇಕ ಸ್ಟಾರ್‌ ನಟರು ಹುಟ್ಟುಹಬ್ಬ ಆಚರಿಸಿಕೊಂಡಿ ದ್ದು, ಈ ಸಾಲಿಗೆ ನಟಿ ರಚಿತಾ ಕೂಡಾ ಸೇರಿದ್ದಾರೆ.

Advertisement

ಸೋಮವಾರ (ಅ.03) ರಚಿತಾ ರಾಮ್‌ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ.

ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ರಚಿತಾ ಕೂಡಾ ಅಭಿಮಾನಿಗಳಿಗೆ ನಿರಾಸೆ ಮೂಡಿಸದೇ, ಅವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ಇನ್ನು, ರಚಿತಾ ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ.

ದರ್ಶನ್‌ ನಾಯಕರಾಗಿರುವ “ಬುಲ್‌ ಬುಲ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಚಿತಾ, ಆ ನಂತರ ಬಿಝಿ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ರಚಿತಾ ನಟಿಸಿರುವ “ಕ್ರಾಂತಿ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದರ ಜೊತೆಗೆ “ವೀರಂ’, “ಬ್ಯಾಡ್‌ ಮ್ಯಾನರ್’, “ಮ್ಯಾಟ್ನಿ’, “ಶಬರಿ’ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ರಚಿತಾ ಕೈಯಲ್ಲಿವೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next