Advertisement

ಆಸೀಸ್‌ ಉಪನಾಯಕಿ ರಶೆಲ್‌ ವಿದಾಯ

10:29 PM Sep 15, 2022 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯ ವನಿತಾ ಕ್ರಿಕೆಟ್‌ ತಂಡದ ಉಪನಾಯಕಿ, ಎಡಗೈ ಆಟಗಾರ್ತಿ ರಶೆಲ್‌ ಹೇನ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ಹಾಗೆಯೇ ಪ್ರಸಕ್ತ ಸಾಲಿನ ವನಿತಾ ಬಿಗ್‌ ಬಾಶ್‌ ಲೀಗ್‌ ತನ್ನ ಕೊನೆಯ ದೇಸಿ ಕ್ರಿಕೆಟ್‌ ಪಂದ್ಯಾವಳಿ ಎಂಬುದಾಗಿಯೂ ಘೋಷಿಸಿದರು.

Advertisement

35 ವರ್ಷದ ರಶೆಲ್‌ ಹೇನ್ಸ್‌ ಕಳೆದ ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರ ವಿಜೇತ ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಸದಸ್ಯೆಯಾಗಿದ್ದರು. ಒಂದು ದಶಕಕ್ಕೂ ಅಧಿಕ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ ಹೇನ್ಸ್‌ 6 ಟೆಸ್ಟ್‌, 77 ಏಕದಿನ ಹಾಗೂ 84 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 383, 2,585 ಹಾಗೂ 850 ರನ್‌ ಹೊಡೆದಿದ್ದಾರೆ. ಏಕದಿನದಲ್ಲಿ 2 ಶತಕ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next