Advertisement

Rabkavi Banhatti; ಕೃಷ್ಣಾ ನದಿಯಲ್ಲಿ ಮುಳುಗಿ ಮೀನುಗಾರ ಸಾವು

09:17 PM Jun 14, 2024 | Team Udayavani |

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಮೀನು ಹಿಡಿಯಲು ಹೋದ ಮೀನುಗಾರ ಬಲೆ ಕಾಲಿಗೆ ಸಿಲುಕಿ ಕೃಷ್ಣಾ ನದಿಯಲ್ಲಿ ಮುಳಗಿ ಸಾವನಪ್ಪಿದ ಘಟನೆ ಶುಕ್ರವಾರ ಸಂಜೆ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕುಲಹಳ್ಳಿ ಗ್ರಾಮದ ಬಾವುಸಾಬ ಬಾಗಡೆ (42 ) ಮೃತ ವ್ಯಕ್ತಿ. ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಬಾವುಸಾಬ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಮೀಪದ ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಹಿಂದಿನ ದಿನ ಬಲೆ ಹಾಕಿ ಮರುದಿನ ತೆಗೆಯುವ ವೇಳೆ ಕಾಲಿಗೆ ಸಿಲುಕಿ ನೀರಲ್ಲಿ ಮಳುಗಿ ಸಾವನ್ನಪ್ಪಿದ್ದಾನೆ.

ಈಜುಗಾರರ ತಂಡ ಹಾಗೂ ಅಗ್ನಿ ಶಾಮಕದಳದ ಸಹಾಯದಿಂದ ಶವಕ್ಕಾಗಿ ಶೋಧ ನಡೆಸಿದ್ದು, ಸ್ಥಳಕ್ಕೆ ಘಟನಾ ಸ್ಥಳಕ್ಕೆ ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಸಿಪಿಐ ಸಂಜೀವ ಬಳಗಾರ, ಪಿಎಐ ಶಾಂತಾ ಹಳ್ಳಿ ಭೇಟಿ ನಡೆ ಪರಿಶೀಲನೆ ನಡೆಸಿದ್ದಾರೆ.

ಮಗಳ ಎದುರೇ ಸಾವು
10 ವರ್ಷದ ಬಾಲಕಿ ತನ್ನ ತಂದೆಯೊಂದಿಗೆ ನದಿಗೆ ಬಂದಿದ್ದಳು. ತಂದೆ ಬಾವುಸಾಬ ಮೀನಿಗೆ ಹಾಕಿದ ಬಲೆಯನ್ನು ತರುವುದಾಗಿ ತಿಳಿಸಿ ನದಿ ತೀರದಲ್ಲಿ ಕಾಯುವಂತೆ ಕೂರಿಸಿದ್ದರು. ನದಿಯೊಳಗೆ ಹೋಗಿ ಬಲೆ ತೆಗೆಯುತ್ತಿದ್ದಂತೆ ನೀರಿನಲ್ಲಿ ಮುಳುಗುತ್ತಿದ್ದು, ಮಗಳ ನಿಸ್ಸಾಹಯಕತೆಯಿಂದ ಮಗಳ ಕಣ್ಮುಂದೆಯೇ ತಂದೆ ನೀರಿನಲ್ಲಿ ಮುಳಿಗಿರುದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next