ಹಣ್ಣುಗಳು ಇರಾನ್ ದೇಶಕ್ಕೆ ರಫ್ತಾಗುತ್ತಿವೆ. ಹೌದು. ರೈತ ದೇವರಾಜ ರಾಠಿಯವರ ಮಗ, ಕೃಷಿಯಲ್ಲಿ ಬಿಎಸ್‌ಸಿ
ಪದವೀಧರರಾಗಿರುವ ಶ್ರೀನಾಥ ತಂದೆಯ ಮಾರ್ಗದರ್ಶನದಲ್ಲಿ ನಾಲ್ಕು ಎಕರೆಯಲ್ಲಿ ಜೈನ ಕಂಪನಿಯ ಜಿ-9 ತಳಿಯ 7200 ಬಾಳೆ ಗಿಡ ಹಚ್ಚಿದ್ದು, ಒಂದು ಗಿಡಕ್ಕೆ ಅಂದಾಜು 28 ರಿಂದ 30 ಕೆ.ಜಿಯಷ್ಟು ಬಾಳೆ ಹಣ್ಣು ಬರುತ್ತದೆ. ಸದ್ಯ ಒಂದು ಕೆ.ಜಿಗೆ 23ರೂ.ಗಳಂತೆ ಖರೀದಿಸುತ್ತಿದ್ದಾರೆ. ಒಂದು ಸಸಿಗೆ ಇಲ್ಲಿಯವರೆಗೆ 150 ರಿಂದ 200 ಖರ್ಚು ಮಾಡಿದ್ದಾರೆ.
Advertisement
ಮಧ್ಯಸ್ಥಗಾರರೇ ಬಾಳೆ ಹಣ್ಣಿನ ಗೊನೆಗಳನ್ನು ಕಡಿದು ತಂದು ಅವುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವುದರಿಂದ ನಮಗೆ ಮಾರುಕಟ್ಟೆಯ ಯಾವುದೆ ತೊಂದರೆ ಇಲ್ಲ ಎನ್ನುತ್ತಾರೆ ಶ್ರೀನಾಥ ರಾಠಿ.
ದೇವರಾಜ ರಾಠಿಯವರು ಕೃಷಿಯಲ್ಲಿ ತಾವೊಬ್ಬರೇ ಬೆಳೆಯದೆ ಸುತ್ತಮುತ್ತಲಿನ ರೈತರಿಗೂ ಸಹಾಯ-ಸಹಕಾರ ನೀಡುತ್ತ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹತ್ತಾರು ರೈತರು ಬೇರೆ ಬೇರೆ ಬೆಳೆ ಬೆಳೆದು ಲಾಭ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
Related Articles
ಶುಚಿಗೊಳಿಸಿ, ನಂತರ ಪ್ಲಾಸ್ಟಿಕ್ ಪೇಪರ್‌ನಲ್ಲಿ ಪ್ಯಾಕ್ ಮಾಡಿ ಇರಾನ್ ದೇಶಕ್ಕೆ ಕಳುಹಿಸುತ್ತಾರೆ.
Advertisement
■ ಕಿರಣ ಶ್ರೀಶೈಲ ಆಳಗಿ