ರಬಕವಿ-ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ಬ್ರಹ್ಮ ದೇವರ ಜಾತ್ರೆಯ ನಿಮಿತ್ತವಾಗಿ ಇದೇ ಪ್ರಥಮ ಬಾರಿಗೆ ಮುಕ್ತ ಶ್ವಾನಗಳ ಓಟದ ಸ್ಪರ್ಧೆಯನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಶ್ವಾನಗಳ ಓಟದ ಸ್ಪರ್ಧೆಯನ್ನು ನೋಡಲು ಗ್ರಾಮದ ಜನರು, ಮಕ್ಕಳು ನೋಡಲು ಕಾತರರಾಗಿ ನಿಂತಿದ್ದರು. ರಬಕವಿ ಬನಹಟ್ಟಿ, ಜಮಖಂಡಿ, ಮುಧೋಳ ಮತ್ತು ಬೀಳಗಿ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಭಾಗಗಳಿಂದ ಶ್ವಾನಗಳು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಶ್ವಾನಗಳಿಗಾಗಿ ಮೂರು ನೂರು ಮೀಟರ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಸ್ಥಾನ ಪಡೆದ ಶ್ವಾನಕ್ಕೆ ರೂ. 4001, ದ್ವಿತೀಯ: ರೂ. 3001, ತೃತೀಯ ರೂ. 2001, ನಾಲ್ಕನೆಯ: ರೂ.1001 ಮತ್ತು ಐದನೆಯ ಸ್ಥಾನ ಪಡೆದ ಶ್ವಾನಕ್ಕೆ ರೂ. 701ಬಹುಮಾನಗಳನ್ನು ಇಡಲಾಗಿತ್ತು.
ವೇದಮೂರ್ತಿ ಬಸಯ್ಯ ಕಾಡದೇವರಮಠರು ಶ್ವಾನಗಳ ಒಟದ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗುರುಲಿಂಗಪ್ಪ ಚಿಂಚಲಿ, ಗುರು ಅಸ್ಕಿ, ಶ್ರೀಕಂಠಯ್ಯ ಹಿರೇಮಠ, ನಾಗಪ್ಪ ಮಠಪತಿ, ಆನಂದ ವಾಘ, ಯಲ್ಲಪ್ಪ ನಿಡೋಣಿ, ರಾಜು ಬಂಗಿ, ಕುತಭರ್ ಮುಲ್ಲಾ ಸೇರಿದಂತೆ ಅನೇಕರು ಇದ್ದರು.