ರಬಕವಿ-ಬನಹಟ್ಟಿ: ವಕೀಲರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ವಕೀಲರು ಸಮಾಜದ ಗೌರವಯುತ ಸ್ಥಾನದಲ್ಲಿದ್ದಾರೆ. ವಕೀಲರ ಮೇಲೆ ಸಮಾಜವು ಸಾಕಷ್ಟು ವಿಶ್ವಾಸ ಮತ್ತು ಭರವಸೆಯನ್ನು ಇಟ್ಟುಕೊಂಡಿದೆ ಎಂದು ಸ್ಥಳೀಯ ನ್ಯಾಯಾಲಯದ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.
ಅವರು ಶನಿವಾರ ಸ್ಥಳೀಯ ವಕೀಲರ ಸಂಘದ ಸಭಾ ಭವನದದಲ್ಲಿ ವಕೀಲರ ದಿನಾಚರಣೆಯ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಕೀಲರು ನ್ಯಾಯಾಲಯದಲ್ಲಿಯ ಪ್ರಕರಣಗಳ ಕುರಿತಂತೆ ಕಚೇರಿಯಲ್ಲಿ ಕುಳಿತುಕೊಂಡು ಅಧ್ಯಯನ ಮಾಡಿಕೊಂಡು ಬರಬೇಕು. ಪ್ರತಿಯೊಂದು ಪ್ರಕರಣ ಕುರಿತು ಕೂಲಕುಂಷ ಅಧ್ಯಯನ ಮುಖ್ಯ. ಈ ನಿಟ್ಟಿನಲ್ಲಿ ಕಿರಿಯ ವಕೀಲರು ಹೆಚ್ಚು ಗಮನ ನೀಡಬೇಕು ಎಂದು ಕಿರಣಕುಮಾರ ವಡಗೇರಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಶುಷ್ಮ ಟಿ.ಸಿ ಮಾತನಾಡಿ, ವಕೀಲಿ ವೃತ್ತಿ ನಿರಂತರ ಕಲಿಕೆಯ ವೃತ್ತಿಯಾಗಿದೆ. ಆದ್ದರಿಂದ ವಕೀಲರು ಅಧ್ಯಯನ ಶೀಲರಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡಾ ಉತ್ತಮ ನ್ಯಾಯದಾನ ದೊರೆಯುವಂತಾಗಬೇಕು ಎಂದರು.
Related Articles
ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಈಶ್ವರಚಂದ್ರ ಭೂತಿ ಮಾತನಾಡಿ, ಕನ್ನಡದಲ್ಲಿ ವಾದ ಮಂಡಿಸುವ ವಕೀಲರಲ್ಲಿ ಕೀಳರಿಮೆ ಬೇಡ. ವಕೀಲರು ತಮ್ಮ ವೃತ್ತಿಯ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕು. ಹಂಚಿಕೊಳ್ಳುವುದರಿಂದ ಜ್ಞಾನ ಹೆಚ್ಚಾಗುತ್ತದೆ. ವಕೀಲರು ಅಧ್ಯಯನ ಶೀಲರಾದರೆ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಡಿ.ತುಬಚಿ, ಎಸ್.ಎಂ.ಫಕೀರಪೂರ, ಸುಜಾತಾ ನಿಡೋಣಿ, ಯಲ್ಲಕ್ಕ ಹೊಸಮನಿ, ಬಿ.ಎಂ. ಅಥಣಿ, ವಕೀಲರು
ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಎಪಿಪಿ ಮಹಾಂತೇಶ ಮಸಳಿ, ಸುರೇಶ ಗೊಳಸಂಗಿ ಇದ್ದರು.
ಮುಕುಂದ ಕೋಪರ್ಡೆ ಸ್ವಾಗತಿಸಿದರು. ಅರ್ಜುನ ಜಿಡ್ಡಿಮನಿ ನಿರೂಪಿಸಿದರು. ಮಹಾಂತೇಶ ಪದಮಗೊಂಡ ವಂದಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರು ಇದ್ದರು.
ಇದನ್ನೂ ಓದಿ : ಎಮಾ೯ಯಿ ಫಾಲ್ಸ್ ನಲ್ಲಿ ಸ್ನಾನಕ್ಕೆ ಇಳಿದಿದ್ದ ವಿದ್ಯಾಥಿ೯ ನೀರಿನಲ್ಲಿ ಮುಳುಗಿ ಸಾವು