Advertisement

ರಬಕವಿ.20ರಿಂದ ಪಂಚಮಹಾಭೂತಗಳ ಮಹಾಅಭಿಯಾನ

03:17 PM Jan 16, 2023 | Team Udayavani |

ರಬಕವಿ-ಬನಹಟ್ಟಿ: ಪುರಾತನ ಸಂಸ್ಕೃತಿಯನ್ನು ಆಧುನಿಕ ಪರಂಪರೆಗೆ ಬೆಸೆಯುವ ಸಲುವಾಗಿ ಆಕಾಶ, ವಾಯು, ಅಗ್ನಿ, ಜಲ ಹಾಗೂ ಪೃಥ್ವಿಗಳ ಪಂಚಮಹಾಭೂತಗಳ ಪ್ರಾತ್ಯಕ್ಷಿಕೆಯೊಂದಿಗೆ ಮಹಾರಾಷ್ಟ್ರದ ಕೊಲ್ಹಾಪುರ ಕನೇರಿಮಠದ ಶ್ರೀ ಅದೃಶ್ಯಕಾಡಸಿದ್ಧೇಶ್ವರ ತಪೋಭೂಮಿಯಲ್ಲಿ ಫೆ.20ರಿಂದ 26ರವರೆಗೆ ಮಹಾ ಅಭಿಯಾನ ಜರುಗುತ್ತಿದೆ ಶ್ರೀ ಹರ್ಷಾನಂದ ಸ್ವಾಮೀಜಿ
ತಿಳಿಸಿದರು.

Advertisement

ರಬಕವಿಯ ಶ್ರೀ ನೀಲಕಂಠೇಶ್ವರ ಮಠದಲ್ಲಿ ರವಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ದೇಶದ ಎಲ್ಲ ವಿಜ್ಞಾನಿಗಳ ದೃಷ್ಟಿ ಈ ಕಾರ್ಯಕ್ರಮದತ್ತ ಹರಿದಿದೆ ಒಂದು ವಾರ ಕಾಲ ಜರುಗುವ ಕಾರ್ಯಕ್ರಮದಲ್ಲಿ 10 ಸಾವಿರ ಜನ ಸಂಶೋಧಕರು ಭಾಗಿಯಾಗಲಿದ್ದಾರೆ. 550 ಎಕರೆ ಪ್ರದೇಶದಲ್ಲಿ 10 ಲಕ್ಷ ಚ.ಅಡಿಯಷ್ಟು ಪೆಂಡಾಲ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ದೇಶದ 10 ರಾಜ್ಯಗಳ ಮುಖ್ಯಮಂತ್ರಿಗಳು, ಏಳು ರಾಜ್ಯಪಾಲರು, 500ಕ್ಕೂ ಅಧಿಕ ಕುಲಪತಿಗಳು, 50 ರಾಷ್ಟ್ರಗಳ ರಾಯಭಾರಿಗಳ ಮಧ್ಯೆ ಪಂಚಮಹಾಭೂತ ಅಭಿಯಾನ ದೇಶದ ದಿಕ್ಕು ಬದಲಿಸುವಲ್ಲಿ ಬುನಾದಿಯಾಗಲಿದೆ ಎಂದು ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಶಿವಶಂಕರ ಶ್ರೀಗಳು ಮಾತನಾಡಿ, ದೇಶಾದ್ಯಂತ ನಿರ್ಲಕ್ಷ್ಯಕ್ಕೊಳಗಾದ ಕುಲಕಸಬುದಾರರ ಪ್ರದರ್ಶನ ಜತೆಗೆ ಮಾರಾಟ ಮಳಿಗೆಗಳು ಸಾವಿರಕ್ಕೂ ಅಧಿಕ ಜನರಿಂದ ನಡೆಯಲಿದೆ ಎಂದರು.ಭೀಮಶಿ ಮಗದುಂ, ಬಸವರಾಜ ತೆಗ್ಗಿ, ಡಾ|ಸಂಗಣ್ಣ ಕುಚನೂರ, ಬಸವರಾಜ ದಲಾಲ್‌, ಸತೀಶ ಹಜಾರೆ, ಶ್ರೀಶೈಲ ದಬಾಡಿ, ರಾಮಣ್ಣಾ ಹುಲಕುಂದ ಮಾತನಾಡಿದರು.

ಅಮಿತ್‌ ನಾಶಿ, ಹರ್ಷವರ್ಧನ್‌ ಪಟವರ್ಧನ, ಜಯಪ್ರಕಾಶ ಸೊಲ್ಲಾಪುರ, ಬಸವರಾಜ ಕುಂಚನೂರ, ಸತೀಶ ಗದಗ, ಅಶೋಕ ಕುಚನೂರ, ಪ್ರಕಾಶ ಮಂಡಿ, ಸಿದ್ದಣ್ಣಾ ಬೆಳಗಲಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮ ಕುರಿತು ಮಾಹಿತಿ ಹಾಗೂ ದಾನಿಗಳಾಗಿ ಸೇವೆ ಮಾಡಲು ಇಚ್ಚಿಸುವವರು ಹರ್ಷಾನಂದ ಸ್ವಾಮೀಜಿ, ಗುರುದೇವಾಶ್ರಮ, ಹುಲ್ಯಾಳ (94824-00199), ಮಹಾಲಿಂಗಪೂರದ ಸಹಜಾನಂದ ಸ್ವಾಮೀಜಿ, ಬ್ರಹ್ಮವಿದ್ಯಾಶ್ರಮ ಮಹಾಲಿಂಗಪೂರ (97314-84835), ಶಿವಶಂಕರ ಶಿವಾಚಾರ್ಯರು, ಹಳೇ ಹುಬ್ಬಳ್ಳಿ (9480-01008), ಚಿದಾನಂದ ಅವಧೂತರು ಹಣಗಂಡಿ (91138262224), ಪ್ರಭು ಬೆನ್ನಾಳೆ ಮಹಾರಾಜರು, ಹಿಪ್ಪರಗಿ (96112-80535), ಶಿವಾನಂದ ಸ್ವಾಮೀಜಿ, ಕಮರಿಮಠ, ಹಳಿಂಗಳಿ(900293459) ಸಂಪರ್ಕಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next