Advertisement

ಟ್ರೆಂಡಿಂಗ್ ನಲ್ಲಿದೆ ‘ಮಾನ್ಸೂನ್ ರಾಗ’ಹಾಡು: ಆ.19ಕ್ಕೆ ಚಿತ್ರ ಬಿಡುಗಡೆ

03:45 PM Jul 16, 2022 | Team Udayavani |

ಡಾಲಿ ಧನಂಜಯ್‌ ಹಾಗೂ ರಚಿತಾ ರಾಮ್‌ ಪ್ರಮುಖ ಭೂಮಿಕೆಯಲ್ಲಿರುವ “ಮಾನ್ಸೂನ್‌ ರಾಗ’ ಆಗಸ್ಟ್‌ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಾಡು ಹಾಗೂ ಟ್ರೇಲರ್‌ ಮೂಲಕ ಸದ್ದು ಮಾಡಲು ಸಜ್ಜಾಗಿರುವ ಚಿತ್ರತಂಡ, ಮೊದಲಿಗೆ “ರಾಗ ಸುಧಾ’ ಹಾಡನ್ನು ಹರಿಬಿಟ್ಟಿದೆ.

Advertisement

ಧನಂಜಯ್‌ ರಗಡ್‌ ಲುಕ್‌ ಹಾಗೂ “ವಿಲನ್‌’ಗಳ ಖದರ್‌ ಡೈಲಾಗ್‌’ನಿಂದ ಶುರುವಾಗುವ ಹಾಡು, ಶುರುವಾದ ಬಳಿಕ ಕಣ್ಣಿಗೆ ತಂಪು, ಕಿವಿಗೆ ಇಂಪು ನೀಡುತ್ತದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋ ಜನೆಯಲ್ಲಿ ಮೂಡಿಬಂದಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿ ಮೋಡಿ ಮಾಡುತ್ತಿದೆ.

ಯಶಾ ಶಿವಕುಮಾರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದು, ದಕ್ಷಿಣ್‌ ಕುಮಾರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಯಶಾ ಇಂಟ್ರೊಡಕ್ಷನ್‌ ಗಾಗಿಯೇ ಮಾಡಿದ ಹಾಡು ಎಂಬುದು ವಿಶೇಷವಾದರೆ, ಇದನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಓದಿದ ಕುಮಟಾ ಬಳಿಯ ಶಾಲೆಯೊಂದರಲ್ಲಿ ಚಿತ್ರೀಕರಣ ನಡೆಸಿರುವುದು ಮತ್ತೂಂದು ವಿಶೇಷ.

ಇದನ್ನೂ ಓದಿ:‘ಪೆಟ್ರೋಮ್ಯಾಕ್ಸ್‌’ ಚಿತ್ರ ವಿಮರ್ಶೆ: ಅನಾಥರ ಬಾಳಲ್ಲಿ ಡಬಲ್‌ ಧಮಾಕಾ

ಮಳೆಯ ಭೋರ್ಗರೆತದ ನಡುವೆ ಕುಣಿವ ಯಶಾ, ರೆಟ್ರೋ ಸ್ಟೈಲ್‌ನಲ್ಲಿ ಕಂಗೊಳಿಸಿದ್ದಾರೆ. ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್‌ ವಿಕ್ರಂ, ರಂಗನಾಯಕ ಸಿನಿಮಾಗಳನ್ನು ನಿರ್ಮಿಸಿರುವ ಎ.ಆರ್‌.ವಿಖ್ಯಾತ್‌ “ಮಾನ್ಸೂನ್‌ ರಾಗ’ಕ್ಕೆ ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಬಂಡವಾಳ ಹೂಡಿದ್ದಾರೆ. ವಿಖ್ಯಾತ್‌ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿ ಲಕ್ಷಾಂತರ ಹಿಟ್ಸ್‌ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next