Advertisement

ಪರಾಸಿನ್‌ ಓಪನ್‌ ಎ ಚೆಸ್‌ ಟೂರ್ನಿ: ಪ್ರಗ್ನಾನಂದ ಚಾಂಪಿಯನ್‌

11:39 PM Jul 17, 2022 | Team Udayavani |

ಹೊಸದಿಲ್ಲಿ: ಭಾರತದ ಯುವ ಗ್ರ್ಯಾನ್‌ಮಾಸ್ಟರ್‌ ಆರ್‌. ಪ್ರಗ್ನಾನಂದ ಸರ್ಬಿಯಾದಲ್ಲಿ ನಡೆದ “ಪರಾಸಿನ್‌ ಓಪನ್‌ ಎ ಚೆಸ್‌ ಟೂರ್ನಿ’ಯಲ್ಲಿ ಚಾಂಪಿಯನ್‌ ಆಗಿದ್ದಾರೆ.

Advertisement

ಕೂಟದುದ್ದಕ್ಕೂ ಅಜೇಯ ರಾಗಿಯೇ ಉಳಿದ ಪ್ರಗ್ನಾನಂದ 9 ಸುತ್ತುಗಳ ಈ ಸ್ಪರ್ಧೆಯಲ್ಲಿ ಒಟ್ಟು 8 ಅಂಕ ಸಂಪಾದಿಸಿದರು. ದ್ವಿತೀಯ ಸ್ಥಾನಿ ಅಲೆಕ್ಸಾಂಡರ್‌ ಅವರಿಗಿಂತ ಕೇವಲ ಅರ್ಧ ಅಂಕದ ಮುನ್ನಡೆ ಹೊಂದಿದ್ದರು. ಭಾರತದ ಮತ್ತೋರ್ವ ಸ್ಪರ್ಧಿ ಎ.ಎಲ್‌. ಮುತ್ತಯ್ಯ 7 ಅಂಕಗಳೊಂದಿಗೆ 4ನೇ ಸ್ಥಾನಿಯಾದರು. ಅಂತಿಮ ಸುತ್ತಿನಲ್ಲಿ ಪ್ರಡ್ಕೆ ವಿರುದ್ಧ ಸೋತ ಭಾರತದ ಮತ್ತೋರ್ವ ಜಿಎಂ ಅರ್ಜುನ್‌ ಕಲ್ಯಾಣ್‌ (6.5) 7ನೇ ಸ್ಥಾನಕ್ಕೆ ಕುಸಿದರು.

ಅಮೋಘ ಫಾರ್ಮ್ ತೋರ್ಪಡಿದಸಿದ ಪ್ರಗ್ನಾನಂದ ಸತತ 6 ಪಂದ್ಯಗಳನ್ನು ಗೆದ್ದು ಭರವಸೆ ಮೂಡಿಸಿದ್ದರು. 7ನೇ ಸುತ್ತಿನಲ್ಲಿ ಪ್ರಡ್ಕೆ ವಿರುದ್ಧ ಡ್ರಾ ಸಾಧಿಸಿದ ಬಳಿಕ ಭಾರತದ ಅರ್ಜುನ್‌ ಕಲ್ಯಾಣ್‌ಗೆ ಸೋಲುಣಿಸಿದರು.

ಅಂತಿಮ ಸುತ್ತಿನಲ್ಲಿ ಕಜಾಕ್‌ಸ್ಥಾನದ ಅಲಿಶೇರ್‌ ಸುಲೆಯ್‌ಮೆನೋವ್‌ ವಿರುದ್ಧ ಡ್ರಾ ಸಾಧಿಸಿದರು. ಈ ಕೂಟದಲ್ಲಿ ಪ್ರಗ್ನಾನಂದ ದ್ವಿತೀಯ ಹಾಗೂ ಪ್ರಡ್ಕೆ ದ್ವಿತೀಯ ಶ್ರೇಯಾಂಕ ಹೊಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next