Advertisement

ರಾ.ಹೆ. 66ರ ಉಡುಪಿ-ಬ್ರಹ್ಮಾವರ ಮಾರ್ಗ: ಹೊಂಡಗಳಿಗೆ ಮುಕ್ತಿ

11:31 PM Sep 23, 2019 | Sriram |

ಉಡುಪಿ: ಉಡುಪಿ-ಬ್ರಹ್ಮಾವರ ರಾ.ಹೆ. 66ರ ಮಾರ್ಗದ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಕಾರ್ಯಕ್ಕೆ ನವಯುಗ ಗುತ್ತಿಗೆ ಸಂಸ್ಥೆ ಮುಂದಾಗಿದೆ.

Advertisement

ಉದಯವಾಣಿ ಪತ್ರಿಕೆಯು ರಸ್ತೆ ನಿರ್ವಹಣೆ ದೋಷ: ವಾಹನ ಸವಾರರ ಜೀವಕ್ಕೆ ಕುತ್ತು! ಎನ್ನುವ ಶೀರ್ಷಿಕೆಯಡಿಯಲ್ಲಿ ಉಡುಪಿ ಬ್ರಹ್ಮಾವರ ಮಾರ್ಗದ ರಸ್ತೆಯಲ್ಲಿರುವ ಹೊಂಡಗಳ ಕುರಿತು ವರದಿಯನ್ನು ಪ್ರಕಟಿಸಿತ್ತು.

ಎಲ್ಲೆಲ್ಲಿ ಹೊಂಡಗಳು?
ಉಡುಪಿ- ಬ್ರಹ್ಮಾವರ ಮಾರ್ಗದ ಅರ್ಧಾಂಶ ಭಾಗಗಳಲ್ಲಿ ಹೊಂಡಗಳಿಂದ ಕೂಡಿತ್ತು. ಕೆಲವೊಂದು ಸ್ಥಳ ದಲ್ಲಿ ಪ್ರತಿ 500 ಮೀ.ಗೆ ಒಂದರಂತೆ ಹೊಂಡಗಳು ಕಾಣ ಸಿಗುತ್ತಿತ್ತು. ಇದೀಗ ಸಂತೆಕಟ್ಟೆ, ಉಪ್ಪೂರು, ಬ್ರಹ್ಮಾವರ ಮಹೇಶ್‌ ಎದುರು ಆಸ್ಪತ್ರೆ, ಬ್ರಹ್ಮಾವರ ಬಸ್‌ ನಿಲ್ದಾಣ ಮಾರ್ಗದಲ್ಲಿನ ಭಾರೀ ಹೊಂಡಗಳನ್ನು ಮುಚ್ಚಲಾಗಿದೆ. ಇನ್ನು ಕೆಲವೆಡೆ ಹೊಂಡಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮಾರ್ಗದ ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಸವಾರರು ರಾತ್ರಿ ಹೊತ್ತು ಈ ಮಾರ್ಗದಲ್ಲಿ ಸಂಚರಿಸಲು ಭಯಪಡುತ್ತಿದ್ದರು.

ಉಪ್ಪೂರು -ಹೇರೂರು ಸೇತುವೆಗೆ ಡಾಮರು
ಉಡುಪಿ: ಅಂತಾರಾಜ್ಯ ಸಂಪರ್ಕ ರಸ್ತೆಯಾದ ರಾ.ಹೆ.66ರ ಉಡುಪಿ- ಕುಂದಾಪುರ ಮಾರ್ಗದ ಉಪ್ಪೂರು-ಹೇರೂರು ಸೇತುವೆ ಮೇಲ್ಭಾಗದ ರಸ್ತೆಗೆ ಸಂಪೂರ್ಣ ಡಾಮರು ಹಾಕಲಾಗಿದೆ.

ಉದಯವಾಣಿ ಪತ್ರಿಕೆ ಅಪಾಯದ ಅಂಚಿನಲ್ಲಿರುವ 47ವರ್ಷದ ಹಳೆಯ ಸೇತುವೆ ಎನ್ನುವ ಶೀರ್ಷಿಕೆಯಡಿಯಲ್ಲಿ ಸೇತುವೆಯಲ್ಲಿ ಕಾಣಿಕೊಂಡ ಹೊಂಡಗಳಿಂದ ನೀರು ಸೇತುವೆಯ ಕೆಳಭಾಗಕ್ಕೆ ಸೋರಿಕೆಯಾಗಿ ಸೇತುವೆಗೆ ಅಪಾಯವಾಗುವ ಸಾಧ್ಯತೆಯಿದೆ ಎನ್ನುವ ಕುರಿತು ವರದಿ ಪ್ರಕಟಿಸ ಲಾಗುತ್ತು. ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ರಾ.ಹೆ. ಪ್ರಾಧಿಕಾರ ಹಾಗೂ ಗುತ್ತಿಗೆ ಸಂಸ್ಥೆ ಇದೀಗ ಸೇತುವೆಗೆ ಸಂಪೂರ್ಣ ಡಾಮರು ಹಾಕಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟಿದೆ.

Advertisement

ಧೃಢತೆ ಪರೀಕ್ಷೆಯಲ್ಲಿ ಪಾಸ್‌ ಈ ಸೇತುವೆ ಮೂರು ವರ್ಷಗಳ ಹಿಂದೆ ಒಂದು ತಿಂಗಳ ಕಾಲ ನಡೆಸಿದ ದೃಢತೆ ಪರೀಕ್ಷೆಯಲ್ಲಿ ಪಾಸ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next