ಮುಂಬೈ: ಏಷ್ಯಾ ಕಪ್ ಬಗ್ಗೆ ಚರ್ಚೆ ಇನ್ನೂ ಮುಗಿದಿಲ್ಲ. ಭಾರತ ತಂಡವು ಪಾಕಿಸ್ಥಾನಕ್ಕೆ ತೆರಳಲು ನಿರಾಕರಿಸಿದ ಬಳಿಕ ಪಾಕ್ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ ಅವರು ವಿವಾದಾತ್ಮಕ ಮಾತುಗಳನ್ನಾಡಿದ್ದರು. ಇದಕ್ಕೆ ಭಾರತದ ರವಿಚಂದ್ರನ್ ಅಶ್ವಿನ್ ತಿರುಗೇಟು ನೀಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದಲ್ಲಿ ಮಾತನಾಡಿದ ಅಶ್ವಿನ್, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಪಾಕಿಸ್ತಾನವು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದಾರೆ.
“ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಅದು ಪಾಕಿಸ್ತಾನದಲ್ಲಿ ನಡೆದರೆ ನಾವು ಭಾಗವಹಿಸುವುದಿಲ್ಲ ಎಂದು ಭಾರತ ಘೋಷಿಸಿದೆ. ನಾವು ಭಾಗವಹಿಸಬೇಕೆಂದರೆ ಸ್ಥಳ ಬದಲಿಸಿ. ಇದು ಸಾಧ್ಯವೆಂದು ನಾವು ಈ ಹಿಂದೆಯೂ ನೋಡಿದ್ದೇವೆ. ನಾವು ಏಷ್ಯಾ ಕಪ್ ಗಾಗಿ ಅವರ ದೇಶಕ್ಕೆ ಹೋಗುವುದಿಲ್ಲ ಎಂದು ಹೇಳಿದಾಗ, ಅವರೂ ನಮ್ಮ ಸ್ಥಳಕ್ಕೆ ಬರುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಭಾರತದಲ್ಲಿನ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಕಳೆದುಕೊಳ್ಳಲು ಅವರಿಗೆ ಸಾಧ್ಯವಿಲ್ಲ” ಎಂದು ಅಶ್ವಿನ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಜನಪ್ರಿಯ ಮದ್ದಳೆ ವಾದಕ
Related Articles
ಏಷ್ಯಾಕಪ್ ಪಂದ್ಯಾವಳಿಯನ್ನು ಯುಎಇ ಬದಲಿಗೆ ಶ್ರೀಲಂಕಾಗೆ ಸ್ಥಳಾಂತರಿಸಬೇಕು ಎಂದು ಅಶ್ವಿನ್ ಭಾವಿಸಿದ್ದಾರೆ.
“ಏಷ್ಯಾ ಕಪ್ ಅನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗುವುದು ಎಂಬುದು ಅಂತಿಮ ಕರೆಯಾಗಿರಬಹುದು. ಇದು 50 ಓವರ್ ವಿಶ್ವಕಪ್ ಗೆ ಪ್ರಮುಖ ಮುನ್ನಡೆಯಾಗಿದೆ. ದುಬೈನಲ್ಲಿ ಅನೇಕ ಪಂದ್ಯಾವಳಿಗಳು ನಡೆದಿವೆ. ಹೀಗಾಗಿ ಶ್ರೀಲಂಕಾಗೆ ಸ್ಥಳಾಂತರಿಸಿದರೆ ನಾನು ಸಂತೋಷಪಡುತ್ತೇನೆ” ಎಂದು ಅಶ್ವಿನ್ ಹೇಳಿದರು.