Advertisement

ರಾಜ್ಯಪಾಲರ ಸಭೆ ಬಳಿಕ ಖಂಡಿತ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿ : ಆರ್. ಅಶೋಕ್

12:46 PM Apr 20, 2021 | Team Udayavani |

ಬೆಂಗಳೂರು : ರಾಜ್ಯಪಾಲರು ಇವತ್ತು ವರ್ಚುವಲ್ ಸಭೆ ಕರೆದಿದ್ದಾರೆ. ಸಭೆಯಲ್ಲಿ ಸಿಎಂ ,ವಿಪಕ್ಷ ನಾಯಕರು ಅಧಿಕಾರಿಗಳು ಸಚಿವರಗಳು ಭಾಗಿಯಾಗಲಿದ್ದಾರೆ. ಕೋವಿಡ್ ನಿರ್ವಹಣೆಗೆ ಗವರ್ನರ್ ಕೂಡ ಭಾಗಿಯಾಗಬೇಕು ಅಂತ ಎಲ್ಲಾ ರಾಜ್ಯದ ರಾಜ್ಯಪಾಲರಿಗೆ ಕೇಂದ್ರ ಸರ್ಕಾರದ ಸೂಚನೆ‌ ನೀಡಿದೆ.  ಹಾಗಾಗೀ ಇದಕ್ಕೆ ಕಾಂಗ್ರೆಸ್ ನವರು ಯಾವುದೇ ಅರ್ಥ ಕಲ್ಪಿಸುವುದು ಬೇಡ ಕಂದಾಯ ಸಚಿವ ಎಂದು ಆರ್. ಅಶೋಕ್ ಹೇಳಿದರು.

Advertisement

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ನಿರ್ವಹಣೆಗೆಗಾಗಿ ಎಲ್ಲಾ ರಾಜ್ಯಗಳಲ್ಲಿ ಗರ್ವನರ್ ಗಳು ಈ‌ ಕೆಲಸ ಮಾತ್ರ ಮಾಡುತ್ತಾ ಇದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಲ್ಲ. ರಾಜ್ಯಪಾಲರ ಜತೆ ಸಭೆ ಮುಗಿದ ಬಳಿಕ ಖಂಡಿತ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ ಎಂದರು.

ಇದನ್ನೂ ಓದಿ : ವಲಸೆ ಕಾರ್ಮಿಕರ ಖಾತೆಗಳಿಗೆ ಹಣವನ್ನು ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ : ರಾಹುಲ್

ಹೊಸ ನಿಯಮಗಳು ಇಂದಿನಿಂದಲೇ ಜಾರಿಯಾಗಲಿದೆ. ತೇಜಸ್ವಿಸೂರ್ಯ ಕೇಂದ್ರ ಸಚಿವರ ಜೊತೆ ಮಾತ ನಾಡಿದ್ದಾರೆ. ಎಲ್ಲೆಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನಿಗೆ ಅವಕಾಶವಿದೆವೋ ಅದನ್ನು ಕೊಡಿಸಲಾಗುವುದು. ಸಿಲಿಂಡರ್ ಮೂಲಕವೇ ಆಗಬೇಕಾದ ಕಡೆಗೆ ಖಾಲಿ ಸಿಲಿಂಡರ್ ಗಳನ್ನು ವಿತರಿಸಿ  ಆ ಮೂಲಕವೂ ದಾಸ್ತಾನಿಗೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸರ್ಕಾರ ಇದಕ್ಕೆ ವ್ಯವಸ್ಥೆ ಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next