Advertisement

ಡಿಕೆಶಿ ಸ್ವಗ್ರಾಮದಲ್ಲಿ ಅಶೋಕ್‌ಗೆ ತರಾಟೆ

12:37 PM Apr 24, 2023 | Team Udayavani |

ಕನಕಪುರ: ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಯಾಕೆ ಕೊಟ್ಟಿದ್ದೀರಿ ಎಂದು ವ್ಯಕ್ತಿಯೊಬ್ಬ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಆರ್‌.ಅಶೋಕ್‌ ಅವರನ್ನು ಪ್ರಶ್ನೆ ಮಾಡಿದ ಘಟನೆ ಡಿಕೆಶಿ ಸ್ವಗ್ರಾಮದಲ್ಲಿ ನಡೆಯಿತು.

Advertisement

ಬಿಜೆಪಿ ಅಭ್ಯರ್ಥಿ ಆರ್‌. ಅಶೋಕ್‌ ಭಾನುವಾರ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಬೇಕುಪ್ಪೆ ವೃತ್ತದದಿಂದ ಆರಂಭವಾದ ಚುನಾವಣಾ ಪ್ರಚಾರ ತಿಗಳರ ಹೊಸಹಳ್ಳಿ, ಹುಲಿಬಲೆ, ಮರಳೇ ಬೇಕುಪ್ಪೆ ಮಾರ್ಗವಾಗಿ ಸಾಗಿ ಡಿಕೆಶಿ ಸ್ವಗ್ರಾಮ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಬಿಜೆಪಿ ಅಭ್ಯರ್ಥಿ ಆರ್‌. ಅಶೋಕ್‌ ದೊಡ್ಡ ಆಲಹಳ್ಳಿ ವೃತ್ತದಲ್ಲಿ ಪ್ರಚಾರದ ಭಾಷಣ ಮಾಡಿ ಮುಕ್ತಾಯಗೊಳಿಸಿ ತೆರೆದ ವಾಹನದಿಂದ ನಿರ್ಗಮಿಸುವಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬ ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಯಾಕೆ ಸ್ಥಳಾಂತರ ಮಾಡಿದಿರಿ. ಕನಕಪುರ ತಾಲೂಕು ಕಾಂಗ್ರೆಸ್‌ ಮನೆ. ಕಾಂಗ್ರೆಸ್‌ ಮನೆಗೆ ನೀವು ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಸಚಿವ ಆರ್‌.ಅಶೋಕ್‌ ಯಾವುದೇ ಪ್ರತಿಕ್ರಿಯೆ ನೀಡದೆ ತೆರೆದ ವಾಹನದಿಂದ ನಿರ್ಗಮಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್‌ಗೌಡ ಮಾತನಾಡಿ, ಕಳೆದು 25 ವರ್ಷಗಳಿಂದ ಶಾಸಕರಾಗಿ ಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್‌ ಅವರು ಯಾಕೆ ಮೆಡಿಕಲ್‌ ಕಾಲೇಜನ್ನು ತರುವ ಪ್ರಯತ್ನ ಮಾಡಲಿಲ್ಲ. ಇಷ್ಟು ವರ್ಷ ಏನು ಮಾಡುತ್ತಿದ್ದೀರಿ ಎಂದು ಮರು ಪ್ರಶ್ನೆ ಹಾಕಿ ತೆರೆದ ವಾಹನದಿಂದ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next