Advertisement
ಹೆಚ್ಚಾಗಿ ತರುಣ ತರುಣಿಯರು ಉತ್ಸಾಹದಿಂದ ಆಚರಿಸುವ ಈ ದಿನವನ್ನು ಕನ್ನಡ ಸಂಘದ ವತಿಯಿಂದ ಯಾಕೆ ಆಯೋ ಜಿ ಸ ಲು ಹೊರಟಿ¨ªಾರೆ ಎಂಬ ಆಶ್ಚರ್ಯ ಎಲ್ಲರಲ್ಲೂ ಇತ್ತು. ಆದರೆ ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡ್ ಆಸ್ಟ್ರೇಲಿಯಾದಲ್ಲಿ ಪ್ರಪ್ರಥಮ ಬಾರಿಗೆ “ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ಆಯೋಜಿಸಿ ಈ ದಿನವನ್ನು ವಿಶೇಷವಾಗಿಸಲು ನಿರ್ಧ ರಿ ಸಿ ತ್ತು. ಅಲ್ಲದೇ ಕ್ವಿಜ್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರೇ ಖು¨ªಾಗಿ ಕಾರ್ಯಕ್ರಮ ನಡೆಸಿಕೊಡುವವರಿದ್ದರು. ಪ್ರೇಮ ಸಂಭ್ರಮ ಜಾಲ ವಿಶೇಷ ಕ್ವಿಜ್ ಸ್ಪರ್ಧೆಯ ಮೂಲಕ ರಸಪ್ರಶ್ನೆಗಳ ಸವಾಲನ್ನೆದುರಿಸಲು ಕೆಎಸ್-ಕ್ಯೂ ಸದಸ್ಯರಿಂದ ಆರು ಗಂಡ-ಹೆಂಡಿರ ಜೋಡಿಗಳು ಸಿದ್ಧವಾಗಿದ್ದರು. ಗೆದ್ದವರಿಗೆ ಬಹುಮಾನವಾಗಿ ಇ-ಪುಸ್ತಕಗಳನ್ನು ಕೊಡಲು ಮೈಲ್ಯಾಂಗ್ ಮತ್ತು ಸಾವಣ್ಣ ಬುಕÕ… ಮುಂದೆ ಬಂದಿದ್ದವು.ಸಂಘದ ವತಿಯಿಂದ ಸೋಮೇಶ್ವರ ಅವರನ್ನು ಸ್ವಾಗತಿಸಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅಖೀಲ- ಅನಿಲ…, ರೋಹಿಣಿ- ಚಂದನ್, ರೂಪ- ಕುಮಾರ್, ಗೌರಿ- ಮಹಾಂತೇಶ್, ದೀಪಾ- ರಾಘವೇಂದ್ರ ಮತ್ತು ಶಾಂಭವಿ- ನಂದೀಶ್ ಅವರನ್ನು ಪರಿಚಯಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
Related Articles
Advertisement
ಒಮ್ಮೊಮ್ಮೆ ಪ್ರಶ್ನೆಗಳ ಜತೆ ವಾದ್ಯಸಂಗೀತವು ಪೈಪೋಟಿ ಹೂಡಿ, ಯಾವುದರ ಕಡೆಗೆ ಗಮನ ಕೊಡಬೇಕು ಎಂಬ ಗೊಂದಲ ಉಂಟುಮಾಡಿ ಹಾಟ್ ಸೀಟಿನಲ್ಲಿ ಕೂತಿದ್ದ ಜೋಡಿಗಳ ಪರದಾಟ ನಗು ತರಿಸಿತ್ತು.ಉತ್ತರ ಕರ್ನಾಟಕದ ಭಾಷೆಗೂ ಮೈಸೂರು ಪ್ರಾಂತ್ಯದ ಕನ್ನಡಕ್ಕೂ ಇದ್ದ ವ್ಯತ್ಯಾಸ ಸೂಕ್ಷ್ಮವಾಗಿ ಕಾಣುತ್ತಿತ್ತು.