ಹುಣಸೂರು : ದೇಶದ ಪ್ರಮುಖ ಕಾರ್ಮಿಕ-ರೈತ-ಕೃಷಿ ಕೂಲಿಕಾರರ ಸಂಘಟನೆಗಳು ಸರಕಾರದ ನೀತಿಗಳ ವಿರುದ್ಧ ಐತಿಹಾಸಿಕ’ ಕ್ವಿಟ್ ಇಂಡಿಯಾ’ ಚಳವಳಿ ನೆನಪಿನಲ್ಲಿ ಸಿ.ಐ.ಟಿಯು ಹಾಗೂ ಪ್ರಾಂತ್ಯ ರೈತ ಸಂಘದ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಸಂಹಿತೆಗಳು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು.
ಇದನ್ನೂ ಓದಿ : ಭೂ ಮಾಫಿಯಾ ಜೊತೆ ಪೊಲೀಸರು ಕೈಜೋಡಿಸುವುದನ್ನು ಸಹಿಸುವುದಿಲ್ಲ: ಸಿಎಂ ಬೊಮ್ಮಾಯಿ
ಸಿ.ಐ.ಟಿಯು ಬಸವರಾಜು ಮಾತನಾಡಿ ರೈತರ ಎಲ್ಲಾ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯುವಂತೆ ಕಾಯ್ದೆ ಮಾಡಬೇಕು. ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು. ರಾಜ್ಯ ಸರಕಾರ ಶ್ರೀಮಂತರಿಗೆ ಅನುಕೂಲವಾಗುವಂತೆ ಭೂಸುಧಾರಣ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು, ಸಾಗುವಳಿ ಚೀಟಿ ವಿತರಿಸಬೇಕು, ರಾಜ್ಯದ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯಾ ಕಾಯಿದೆಗಳ ವಾಪಸ್ಸು ಪಡೆಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಬೆಲೆ ಇಳಿಸಬೇಕು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಗ್ರಾಮಪಂಚಾಯಿತಿ ನೌಕರರನ್ನು ಖಾಯಂಗೊಳಿಸಬೇಕು. ಎಲ್ಲಾ ವಲಸೆ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರನ್ನು ನೊಂದಣಿ ಮಾಡಬೇಕು.ದಿನಗೂಲಿ, ಗುತ್ತಿಗೆ, ಯೋಜನಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ ಮತ್ತು ಪಿಂಚಣಿಯನ್ನು ಖಾತರಿಪಡಿಸಬೇಕು. ತಕ್ಷಣವೇ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕೆಂದರು.
ಮುಖಂಡ ಜಗದೀಶ್ ಸೂರ್ಯ ಮಾತನಾಡಿ ನರೇಗಾ ಯೋಜನೆಯಡಿ ಅನುದಾನವನ್ನು ಹೆಚ್ಚಿಸಿ ದಿನಕ್ಕೆ 600ರೂ. ನಂತೆ ಕನಿಷ್ಠ 200ದಿನಗಳ ಕೆಲಸ ಖಾತರಿಪಡಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ೧೦ಸಾವಿರದಂತೆ ನಗದು ವರ್ಗಾವಣೆ ಮಾಡಬೇಕು.ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ ಶೇ.6ರಷ್ಟನ್ನು ನಿಗದಿಪಡಿಸಬೇಕು. ಕೋವಿಡ್ ತೀವ್ರ ಏರಿಕೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಕೋವೀಡ್‌ನಿಂದ ಮೃತಪಟ್ಟ ಎಲ್ಲಾ ಕುಟುಂಬಗಳಿಗೂ ಕನಿಷ್ಟ 5ಲಕ್ಷ ಪರಿಹಾರ ನೀಡಬೇಕು.ಕರಾಳ ಅಗತ್ಯ ರಕ್ಷಣಾ ಸೇವಾ ಸುಗ್ರೀವಾಜ್ಞೆ ಅನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅನೇಕ ಮುಖಂಡರು ಬಾಗವಹಿಸಿದ್ದರು.
ಇದನ್ನೂ ಓದಿ : 13 ತಿಂಗಳುಗಳ ನಂತರ ಆಸ್ಪತ್ರೆಯಿಂದ ಮನೆ ತಲುಪಿದ ಆ್ಯಪಲ್ ತೂಕದ ಮಗು..!