Advertisement
ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಕುರಿತ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಕಳುಹಿಸಿದ್ದ ವರದಿಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ) ನೀಡಿರುವ ಅನುಮೋದನೆ ವಿವರ ಜಿಲ್ಲೆಗೆ ಬಂದಿದೆ. ಮರಳುಗಾರಿಕೆಗೆ ಪರವಾನಿಗೆ ನೀಡುವ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಮುಂದಿನ ವಾರ ಜರಗಲಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ 7 ಸದಸ್ಯರ ಸಮಿತಿ ಮರಳುಗಾರಿಕೆಗೆ ಪರವಾನಿಗೆ
ನೀಡುವ ಪ್ರಕ್ರಿಯೆ ನಡೆಸಲಿದೆ. ಕಳೆದ ಬಾರಿ 2 ಹಂತಗಳಲ್ಲಿ ಪರವಾನಿಗೆ ನೀಡ ಲಾಗಿದ್ದು ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಸಿಆರ್‌ಝಡ್ ವಲಯದಲ್ಲಿ 22 ಬ್ಲಾಕ್‌ಗಳಲ್ಲಿ ಒಟ್ಟು 105 ಮಂದಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು. ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಮರು ಆರಂಭಗೊಳ್ಳದಿರುವುದು ನಿರ್ಮಾಣ ಚಟುವಟಿಕೆಗಳಿಗೆ ಮರಳಿನ ತೀವ್ರ ಸಮಸ್ಯೆ ಸೃಷ್ಟಿಸಿದೆ.
Related Articles
ಕಳೆದ ಬಾರಿಯಂತೆ ಈ ಬಾರಿಯೂ ತುಂಬೆ ವೆಂಟೆಡ್‌ಡ್ಯಾಂನಲ್ಲಿ ಡ್ರೆಜ್ಜಿಂಗ್ (ಮರಳು ಎತ್ತುವಿಕೆ) ನಡೆಯಲಿದೆ. ಡ್ರೆಜ್ಜಿಂಗ್‌ಗೆ ಕರ್ನಾಟಕ ಮಿನರಲ್ ಕಾರ್ಪೊರೇಶನ್‌ಗೆ ಕೋರಿಕೆ ಸಲ್ಲಿಸಲಾಗುವುದು. ಅವರು ನಡೆಸದಿದ್ದರೆ ಕಳೆದ ಬಾರಿಯ ವ್ಯವಸ್ಥೆಯನ್ನೇ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಮರಳನ್ನು ಕಳೆದ ಬಾರಿಯಂತೆ ಆ್ಯಪ್ ಮೂಲಕ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಕಳೆದ ಬಾರಿ ತುಂಬೆಯಲ್ಲಿ ನಡೆಸಿದ ಡ್ರೆಜ್ಜಿಂಗ್‌ನಲ್ಲಿ 86,000 ಮೆಟ್ರಿಕ್ ಟನ್ ಮರಳು ಲಭ್ಯವಾಗಿದ್ದು ಇದೆಲ್ಲವೂ ವಿಲೇವಾರಿಯಾಗಿದೆ.
Advertisement