Advertisement

ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ

12:16 AM Apr 03, 2019 | Team Udayavani |

ಬೆಂಗಳೂರು: ನಗರದ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ. ನೀರಿನ ಸಮಸ್ಯೆ ಇರುವ 110 ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹೇಳಿದರು.

Advertisement

ಸಖೀ ಮಾದರಿ ಮತಗಟ್ಟೆಯನ್ನು ಉದ್ಘಾಟನೆ ಬಳಿಕ ಮಾತನಾಡಿ,”ಬೆಂಗಳೂರಿನ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಕೊಳವೆಬಾವಿಗಳನ್ನು ಕೊರೆಯಲು ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ, ಕೊಳವೆಬಾವಿಗಳನ್ನು ಕೊರೆಯಲು ಸಾಧ್ಯವಿಲ್ಲ, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಯವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.

“ಪಾಲಿಕೆಯ ಅಧೀನದಲ್ಲಿ 267 ಟ್ಯಾಂಕರ್‌ಗಳಿವೆ. ಇನ್ನು ಅಗತ್ಯವಿರುವ ಟ್ಯಾಂಕರ್‌ಗಳನ್ನು ಖರೀದಿಸುವ ಉದ್ದೇಶದಿಂದ ಟೆಂಡರ್‌ ಕರೆಯಲಾಗಿದೆ. ಒಂದು ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ. ನಗರದಲ್ಲಿ ಟ್ಯಾಂಕರ್‌ಗಳಿಗೆ ನಿರ್ದಿಷ್ಟ ದರವನ್ನು ನಿಗದಿ ಮಾಡುವುದಕ್ಕೆ ಚುನಾವಣಾ ಆಯೋಗದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ. ಸಾಧ್ಯವಾದಷ್ಟು ಬೇಗ ನಿರ್ದಿಷ್ಟ ದರ ನಿಗದಿಪಡಿಸಲಾಗುವುದು’ ಎಂದರು.

ಕೆ.ಆರ್‌ ಮಾರುಕಟ್ಟೆಯಲ್ಲಿ ಬದಲಾವಣೆ: ಕೃಷ್ಣರಾಜೇಂದ್ರ (ಕೆ.ಆರ್‌ ಮಾರುಕಟ್ಟೆ) ಮಾರುಕಟ್ಟೆಯಲ್ಲಿ ಒತ್ತುವರಿ ತೆರುವು ಕಾರ್ಯಚರಣೆ ಮಂಗಳವಾರವು ಮುಂದುವರೆದಿದ್ದು, ಅವಶೇಷಗಳನ್ನು ನಾಲ್ಕು ದಿನಗಳಲ್ಲಿ ತೆರವುಗೊಳಿಸಲಾಗುವುದು.

ಐತಿಹಾಸಿಕ ಕಟ್ಟಡ ಹೊಂದಿರುವ ಕೆ.ಆರ್‌ ಮಾರುಕಟ್ಟೆಯನ್ನು ನವೀಕರಿಸಿ, ಮಾರುಕಟ್ಟೆಗೆ ಹೊಸರೂಪ ನೀಡಲಾಗುವುದು. ಮಾರುಕಟ್ಟೆಯಲ್ಲಿ ಮೂರು ಪಾಳಿಗಳಲ್ಲಿ 30 ಜನ ಮಾರ್ಷಲ್‌ಗ‌ಳು ಕಾರ್ಯನಿರ್ವಹಿಸುತ್ತಿದ್ದು, ಮತ್ತೆ ಮಾರುಕಟ್ಟೆಯಲ್ಲಿ ಒತ್ತುವರಿಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುವುದು ಎಂದರು.

Advertisement

ಕೆ.ಆರ್‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ 2 ಕೋಟಿ 70 ಲಕ್ಷ ರೂ. ಮೀಸಲಿರಿಸಿದ್ದು, 1800 ಆಗ್ನಿಶಮನ ಪೈಪ್‌ಗ್ಳನ್ನು ಆಳವಡಿಸಲಾಗುವುದು, ಬೆಂಕಿಪತ್ತೆ ಹಚ್ಚುವ ಸಾಧನ ಸೇರಿದಂತೆ ಹಲವು ಸುಧಾರಿತ ಸಾಧನಗಳನ್ನು ಆಳವಡಿಸಲಾಗುವುದು ಎಂದು ಮಾಹಿತಿ ನೀಡಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೆ.ಆರ್‌ ಮಾರುಕಟ್ಟೆ ಅಭಿವೃದ್ಧಿಗೆ 50 ಕೋಟಿ ರೂ.ಗಳಲ್ಲಿ ಟೆಂಡರ್‌ ಕರೆಯಲಾಗಿದೆ.

ಮೆಟ್ರೋದಿಂದ ನೇರವಾಗಿ ಕೆ.ಆರ್‌ ಮಾರುಕಟ್ಟೆಯ ಎರಡನೇ ಮಹಡಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ನಿರ್ಮಾಣವಾಗಲಿದೆ ಹಾಗೂ ಮಾರುಕಟ್ಟೆಯಿಂದ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಮಾಂಸ ಮಾರಾಟ ಮಾರುಕಟ್ಟೆ ಮತ್ತು ಅಂಚೆ ಕಚೇರಿ ಹಳೆಯದಾಗಿದ್ದು, ಇವೆರಡನ್ನೂ ಕೆಡವಿ ಹೊಸ ಕಟ್ಟಡಗಳನ್ನು ಕಟ್ಟಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next