Advertisement

ರೈತರಿಗೆ ಶೀಘ್ರ ಸಾಲ ತೀರುವಳಿ ಪತ್ರ

11:14 AM Dec 03, 2018 | Team Udayavani |

ಕೆ.ಆರ್‌.ನಗರ: ರಾಜ್ಯದಲ್ಲಿ ಪ್ರತಿ ತಿಂಗಳಿಗೊಮ್ಮೆ ರೈತರ ಸಭೆ ಕರೆದು, ಸಾಲ ತೀರಿಸುವುದು ಮತ್ತು ಬೆಳೆ ಬಗ್ಗೆ ಸಲಹೆ ಸಹಕಾರವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಳಲಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಹೇಳಿದರು.

Advertisement

ತಾಲೂಕಿನ ಕರ್ತಾಳು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ನಡೆಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಂದ ಜನತೆಯ ದೊಡ್ಡ ಮಟ್ಟದ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸಲು ಸಾಧ್ಯವಾಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸುವುದರಿಂದ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಬಳಿ ಅಲೆದಾಡುವುದು ತಪ್ಪಿದಂತಾಗಿದೆ ಎಂದು ಹೇಳಿದರು.   

ಸತತ ಮೂರು ಬಾರಿ ಆಯ್ಕೆ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈಗಾಗಲೇ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಾರೆ, ಮುಂದಿನ ಅಧಿವೇಶನ ಪ್ರಾರಂಭವಾಗುವುದರೊಳಗೆ ರೈತರಿಗೆ ಅದರ ತೀರುವಳಿ ಪತ್ರ ವಿತರಿಸಲಾಗುವುದು. ಕೆ.ಆರ್‌.ನಗರ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕನ್ನಾಗಿ ಆಯ್ಕೆ ಮಾಡಿರಲಿಲ್ಲ. ಆದರೆ, ತನ್ನ ಪ್ರಾಮಾಣಿಕತೆಯನ್ನು ಮೆಚ್ಚಿ ಮೂರನೇ ಬಾರಿ ಆಯ್ಕೆ ಮಾಡಿ ಸಚಿವನಾಗಲು ಕಾರಣರಾಗಿದ್ದೀರಿ.

ಈ ತಾಲೂಕಿನ ಅಭಿವೃದ್ಧಿ ಮಾಡುವ ಮೂಲಕ ತಮ್ಮಗಳ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು. ಈ ಭಾಗದಲ್ಲಿ 6 ಕೋಟಿ ರೂ.ನಲ್ಲಿ ಕೆಇಬಿ ಉಪಕೇಂದ್ರ ಪ್ರಾರಂಭಿಸಲು ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದಾರೆ. ಹನಸೋಗೆ ಪಶು ವೈದ್ಯ ಆಸ್ಪತ್ರೆಗೆ 32 ಲಕ್ಷ ರೂ., ಈಗಾಗಲೇ ತಾಲೂಕಿನಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಉಳಿದ ರಸ್ತೆ ಅಭಿವೃದ್ಧಿಗೆ ಶೀಘ್ರ ಗಮನ ಹರಿಸಲಾಗುವುದು ಎಂದು ಹೇಳಿದರು.

ಗೋವಿಂದಶೆಟ್ಟಿ ಮನೆಯಲ್ಲಿ ವಾಸ್ತವ್ಯ: ಸಚಿವರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಲ್ಲದೆ, ಸ್ಥಳದಲ್ಲೇ ಕುಂದುಕೊರತೆ ಬಗೆ ಹರಿಸಲು ಮುಂದಾದರು.

Advertisement

ನಂತರ ಆಗಮಿಸಿದ್ದ ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಒದಗಿಸಲಾಗಿತ್ತು. ಸಹ ಪಕ್ತಿಯಲ್ಲಿಯೇ ಗ್ರಾಮದ ಜನತೆಯೊಂದಿಗೆ ಕುಳಿತು ಸಚಿವ ಸಾ.ರಾ.ಮಹೇಶ್‌ ಊಟ ಸವಿದರು. ನಂತರ ಕುಂಬಾರ ಸಮಾಜದ ಗೋವಿಂದಶೆಟ್ಟಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.

ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕ ಮಹಂತೇಶ್‌, ಉಪವಿಭಾಗಾಧಿಕಾರಿ ನಿತಿನ್‌, ತಹಶೀಲ್ದಾರ್‌ ಪ್ರಶಾಂತ್‌, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿಂದ್ಯಾ, ಎಎಸ್‌ಪಿ ಅರುಣಾಂಗ್ಯೂ ಗಿರಿ, ಪಿಡಿಎಲ್‌ಆರ್‌ ರಮ್ಯಾ, ಸಿಡಿಪಿಒ ಸುಮಿತ್ರ, ಬಿಇಒ ರಾಜು, ಅಬಕಾರಿ ನಿರೀಕ್ಷಕಿ ಎಚ್‌.ಡಿ.ರಮ್ಯಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್‌,

ಇಒ ಲಕ್ಷ್ಮೀಮೋಹನ್‌, ಪಿಡಬ್ಲೂಡಿ ಎಂಜಿನಿಯರ್‌ ಟಿ.ಡಿ.ಪ್ರಸಾದ್‌, ವಲಯ ಅರಣ್ಯಾಧಿಕಾರಿ ಕುಮಾರ್‌, ಹಾರಂಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್‌, ಸಹಾಯಕ ಎಂಜಿನಿಯರ್‌ಗಳಾದ ಎಸ್‌.ಪ್ರಕಾಶ್‌, ಅಭಿಲಾಶ್‌, ಕಿರಣ್‌, ಇಲಾಖೆ ಸಹಾಯಕ ನಿರ್ದೇಶಕ ರಂಗರಾಜನ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನಸೋಗೆ ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next