Advertisement

ಶೀಘ್ರ ಅರಸು ಭವನ ಲೋಕಾರ್ಪಣೆ

12:28 PM Feb 28, 2018 | |

ಹುಣಸೂರು: ಹುಣಸೂರಿನಲ್ಲಿ 7.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ದೇವರಾಜೇ ಅರಸ್‌ ಭವನವು ಕರ್ನಾಟಕದಲ್ಲಿ ಅತೀ ದೊಡ್ಡದಾಗಿದ್ದು, ಶೀಘ್ರವೇ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.

Advertisement

ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಬದಿಯ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಭವನದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಇಡೀ ನಾಡಿಗೆ ಸಾಮಾಜಿಕ ನ್ಯಾಯ ಒದಗಿಸಿದ ಅರಸರ ಹೆಸರಿನಲ್ಲಿ ಭವನ ನಿರ್ಮಾಣವಾಗುತ್ತಿದ್ದು, ಆ ಮೂಲಕ ಇಲ್ಲಿ ಬಡವರ ಕಲ್ಯಾಣ ಸೇರಿದಂತೆ ಅನೇಕ ಸ‌ರ್ಕಾರಿ ಕಾರ್ಯಕ್ರಮಗಳು ನಡೆಯಲಿದೆ.

ಅರಸರ ಜನ್ಮ ಶತಮಾನೋತ್ಸವದ ಅಂಗವಾಗಿ ನಿರ್ಮಿಸುತ್ತಿರುವ ಈ ಭವನದಲ್ಲಿ 700 ಮಂದಿ ಕೂರಬಹುದಾದ ದೊಡ್ಡಹಾಲ್‌, ಡಾರ್ಮೆಂಟರಿ, 8 ಕೊಠಡಿಗಳು, ಊಟದ ಹಾಲ್‌ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. 

ಕಲ್ಲಹಳ್ಳಿ ಅಭಿವೃದ್ಧಿಗೂ ಕ್ರಮ: ಅರಸು ಕಲ್ಲಹಳ್ಳಿ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಬಗೆಗಿನ ಪ್ರಶ್ನೆಗೆ ಕೆಲ ತಾಂತ್ರಿಕ ಕಾರಣದಿಂದಾಗಿ ತಡವಾಗಿದ್ದು, ಶೀಘ್ರ ಕಾಮಗಾರಿ ಮುಗಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭವನ ನಿರ್ಮಾಣ ಸಂತಸ: ಶಾಸಕ ಎಚ್‌.ಪಿ.ಮಂಜುನಾಥ್‌ ಮಾತನಾಡಿ, ಇದೊಂದು ಸಾಂಸ್ಕೃತಿಕ ಭವನವಾಗಿದ್ದು, ಸಾರ್ವಜನಿಕ ಸೇವೆಗೆ ಅಣಿಯಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಸಚಿವ ಆಂಜನೇಯ ಅವರ ವಿಶೇಷ ಆಸಕ್ತಿಯಿಂದಾಗಿ, ತಮ್ಮ ಅವಧಿಯಲ್ಲಿ ವೈಭವಯುತ ಭವನವಾಗುತ್ತಿರುವುದು ಸಂತಸ ತಂದಿದೆ. ಕಾಮಗಾರಿ ಬೇಗ ಮುಗಿಸಿರೆಂದು ನಿರ್ಮಿತಿ ಕೇಂದ್ರದ ಎಂಜಿನಿಯರ್‌ ರಕ್ಷಿತ್‌ಗೆ ಇದೇ ವೇಳೆ ಶಾಸಕರು ತಿಳಿಸಿದರು.

Advertisement

ಜಿಪಂ ಸದಸ್ಯೆ ಡಾ.ಪುಷ್ಪಅಮರ್‌ನಾಥ್‌, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿಧೇìಶಕಿ ಪ್ರಭಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣ್‌, ಕಾರ್ಯಾಧ್ಯಕ್ಷ ಎ.ಪಿ.ಸ್ವಾಮಿ, ಮಾಜಿ ಅಧ್ಯಕ್ಷ ಬಸವರಾಜು,ಯುವ ಮಾಜಿ ಅಧ್ಯಕ್ಷ ರಾಘು, ಮುಖಂಡರಾದ ಕರುಣಾಕರ್‌,ರವಿಸಾಲಿಯಾನ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಕರ್ನಾಕಟದಲ್ಲಿ ಕ್ರೈಂ ಕಡಿಮೆಯಾಗಿದೆ: ನಿಮ್ಮ ಸರ್ಕಾರದ ಅವಧಿಯಲ್ಲಿ ಅಪರಾಧ ನಿಯಂತ್ರಿಲಾರದಷ್ಟು ಕಾನೂನು ಸುವ್ಯವಸ್ಥೆ ಹದಗೆಟಿದೆಯಲ್ಲಾ ಎಂಬ ಪ್ರಶ್ನೆಗೆ ಬೆಂಗಳೂರಿನಂತ ದೊಡ್ಡ ನಗರಗಳಲ್ಲಿ ಲ್ಯಾಂಡ್‌ ಮಾಫಿಯ ಸಾಮಾನ್ಯವಾಗಿದ್ದು, ಇಲ್ಲಿ ಸಣ್ಣ-ಪುಟ್ಟ ಗಲಾಟೆಗಳಾಗುವುದು ಸಾಮಾನ್ಯ ಸರ್ಕಾರ ಲ್ಯಾಂಡ್‌ ಮಾಫಿಯಾ ನಿಯಂತ್ರಣಕ್ಕೆ ಶಕ್ತಿ ಮೀರಿ ಶ್ರಮಿಸುತ್ತದೆ,

ಬಿಜೆಪಿ ಸ‌ರ್ಕಾರವಿರುವ ಮುಂಬೈ, ಗುಜರಾತ್‌ ಸೇರಿದಂತೆ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಇಲ್ಲಿಗಿಂತ ಹೆಚ್ಚು ಕ್ರೈಂ ನಡೆಯುತ್ತಿವೆ ಎಂದ ಸಚಿವ ಆಂಜನೇಯ, ನಮ್ಮ ರಾಜ್ಯದಲ್ಲಿ ಅಪರಾಧ ಪ್ರಕರಣ ಕಡಿಮೆ ಇರುವುದು ಸಮಾಧಾನತಂದಿದೆ. ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next