Advertisement
ಚನ್ನಕೇಶವ ಸ್ವಾಮಿ ದೇಗುಲಕ್ಕೆ ದಂಪತಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸ್ಪರ್ಧೆಯಿಂದ ಯಾವ ಪಕ್ಷಕ್ಕೆ ಲಾಭ-ನಷ್ಟವಾಗಿದೆ ಎಂಬ ಬಗ್ಗೆ ಚರ್ಚೆ ನಡೆಸುವುದು ಅಪ್ರಸ್ತುತ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪಕ್ಷದಿಂದ 30 ಜಿಲ್ಲೆಗಳಲ್ಲಿ ಯಾವ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ನಿಲ್ಲಿಸಬೇಕೆಂಬ ಬಗ್ಗೆ ಆಗಸ್ಟ್‌ನಲ್ಲಿ ಪಕ್ಷದ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸಿಬಿಐ ಕೋರ್ಟ್‌ನಲ್ಲಿ 152 ಆಸ್ತಿಗಳ ವಿಚಾರಣೆ ನಡೆಯುತ್ತಿದೆ. ಇದರಲ್ಲಿ 80 ಆಸ್ತಿ ಪ್ರಕರಣಗಳನ್ನು ಕೈ ಬಿಡಲಾಗಿದ್ದು 72 ಪ್ರಕರಣಗಳು ಕೋರ್ಟ್‌ನಲ್ಲಿದ್ದು ಆಸ್ತಿ ಮಾರಾಟ ಮಾಡ ಬಾರದು ಎಂಬ ಷರತ್ತು ಇದೆಯೇ ಹೊರತು ಯಾವ ಆಸ್ತಿಯನ್ನೂ ವಶಪಡಿಸಿಕೊಂಡಿಲ್ಲ ಎಂದರು. Advertisement
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಶೀಘ್ರ ತೀರ್ಮಾನ: ಜನಾರ್ದನ ರೆಡ್ಡಿ
10:25 PM Jun 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.