Advertisement
1. ಹುರಿಗಡಲೆ ಉಂಡಿಬೇಕಾಗುವ ಸಾಮಗ್ರಿ: ಹುರಿಗಡಲೆ (ಪುಟಾಣಿ)- 2 ಲೋಟ, ಬೆಲ್ಲದ ಪುಡಿ- ಒಂದು ಕಪ್, ಒಣಕೊಬ್ಬರಿ- ಕಾಲು/ಅರ್ಧ ಕಪ್,
ಏಲಕ್ಕಿ ಪುಡಿ, ತುಪ್ಪ- ಮೂರು ಚಮಚ.
ಬೇಕಾಗುವ ಸಾಮಗ್ರಿ: ಮಂಡಕ್ಕಿ, ಅಚ್ಚಖಾರದ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲೆ, ಉಪ್ಪು, ಎಣ್ಣೆ, ಲಿಂಬೆಹಣ್ಣು, ಓಂಪುಡಿ, ಖಾರಸೇವು, ಕೊತ್ತಂಬರಿ ಸೊಪ್ಪು.
Related Articles
Advertisement
3. ಅವಲಕ್ಕಿ ಪುಳಿಯೋಗರೆಬೇಕಾಗುವ ಸಾಮಗ್ರಿ: ಮೀಡಿಯಂ ಅವಲಕ್ಕಿ – ಎರಡು ಬಟ್ಟಲು, ಹುಣಸೆ ಹಣ್ಣಿನ ರಸ- ಮೂರು ಚಮಚ, ಕಡ್ಲೆಬೀಜ (ನೆಲಗಡಲೆ), ಕರಿಬೇವು, ಉಪ್ಪು, ಅರಿಶಿನ ಪುಡಿ, ಇಂಗು, ಪುಳಿಯೋಗರೆ ಮಸಾಲೆ- ಮೂರು ಚಮಚ, ಕೊತ್ತಂಬರಿ ಸೊಪ್ಪು, ಎಣ್ಣೆ, ಸಾಸಿವೆ. ಮಾಡುವ ವಿಧಾನ: ಅವಲಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಕರಿಬೇವು, ನೆಲಗಡಲೆ, ಇಂಗು ಹಾಕಿ ನಂತರ ಹುಣಸೆಹಣ್ಣಿನ ರಸ, ಅರಿಶಿನಪುಡಿ ಹಾಕಿ ಒಂದು ನಿಮಿಷದ ನಂತರ ಪುಳಿಯೋಗರೆ ಮಸಾಲೆ ಹಾಕಿ. ಆ ಮಿಶ್ರಣಕ್ಕೆ ಅವಲಕ್ಕಿ ಮತ್ತು ಉಪ್ಪು ಹಾಕಿ ಕೈಯಾಡಿಸಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಕಾಯಿತುರಿ ಹಾಕಿದರೆ ವಿಶಿಷ್ಟ ಬಗೆಯ ಅವಲಕ್ಕಿ ಪುಳಿಯೋಗರೆ ರೆಡಿ. ಹುಣಸೆಹಣ್ಣಿನ ಬದಲು ಲಿಂಬೆಹಣ್ಣಿನ ರಸ ಬಳಸಬಹುದು. 4. ಚಪಾತಿ ಉಪ್ಪಿಟ್ಟು
ಬೇಕಾಗುವ ಸಾಮಗ್ರಿ: ಚಪಾತಿ- 3, ಈರುಳ್ಳಿ-1, ಹಸಿ ಮೆಣಸು-2, ಟೊಮೇಟೊ-1, ಒಗ್ಗರಣೆಗೆ-ಉದ್ದಿನ ಬೇಳೆ, ಜೀರಿಗೆ, ಕಡಲೇ ಬೇಳೆ, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಚಪಾತಿಗಳನ್ನು ಚಿಕ್ಕದಾಗಿ ಮುರಿದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಜೀರಿಗೆ, ಹಸಿಮೆಣಸು, ಉದ್ದು, ಕಡಲೇಬೇಳೆ ಹಾಕಿ ಒಗ್ಗರಣೆ ಮಾಡಿ. ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊ ಸೇರಿಸಿ ಹುರಿಯಿರಿ. ನಂತರ ನೀರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಇದಕ್ಕೆ ಚಪಾತಿ ತುಂಡುಗಳನ್ನು ಹಾಕಿ, ಉಪ್ಪಿಟ್ಟಿನ ಹದಕ್ಕೆ ಗಟ್ಟಿಯಾಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಿದರೆ ಚಪಾತಿ ಉಪ್ಪಿಟ್ಟು ರೆಡಿ. ಬೇಕಿದ್ದರೆ ಬೀನ್ಸ್, ಬಟಾಣಿ, ಕ್ಯಾರೆಟ್‌ಗಳನ್ನು ಕೂಡಾ ಸೇರಿಸಬಹುದು. (ಅಕ್ಕಿರೊಟ್ಟಿಯಿಂದಲೂ ಉಪ್ಪಿಟ್ಟು ಮಾಡಬಹುದು)
-ಅಕ್ಷದ ಅನಂತ್ ಜೋಶಿ, ಗೋವಾ -ಅಕ್ಷದ ಅನಂತ್ ಜೋಶಿ, ಗೋವಾ