Advertisement

ಪತಿ ಸಮಾಧಿ ಪಕ್ಕದಲ್ಲೇ ರಾಣಿ 2ನೇ ಎಲಿಜಬೆತ್‌ ಅಂತ್ಯಕ್ರಿಯೆ

12:02 AM Sep 16, 2022 | Team Udayavani |

ಲಂಡನ್‌: ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ಪತಿ ರಾಜಕುಮಾರ್‌ ಫಿಲಿಪ್‌ ಅವರ ಸಮಾಧಿಯ ಪಕ್ಕದಲ್ಲೇ ರಾಣಿ 2ನೇ ಎಲಿಜಬೆತ್‌ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗುತ್ತದೆ. ಸೋಮವಾರ ಸ್ಥಳೀಯ ಸಮಯ ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ರಾಜಕುಟುಂಬ ತಿಳಿಸಿದೆ.

Advertisement

ಅಂತ್ಯಕ್ರಿಯೆಯ ಅನಂತರ 2 ನಿಮಿಷ ರಾಷ್ಟ್ರೀಯ ಮೌನ ಆಚರಿಸಲಾಗುತ್ತದೆ. ಸೆ. 19ರಂದು ಬೆಳಗ್ಗೆ 8 ಗಂಟೆಗೆ  ವೆಸ್ಟ್‌ಮಿನಿಸ್ಟರ್‌ ಅಬೆ ಬಾಗಿಲುಗಳು ತೆರೆಯಲಿವೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ವಿಶ್ವದ 500 ನಾಯಕರು ಹಾಗೂ ಇತರ 1,500 ಅತಿಥಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಲೆತಿರುಗಿ ಬಿದ್ದ ಭದ್ರತಾ ಸಿಬಂದಿ: ರಾಣಿಯ ಪಾರ್ಥಿವ ಶರೀರ ಇರಿಸಲಾಗಿರುವ ವೆಸ್ಟ್‌ಮಿನಿಸ್ಟರ್‌ ಹಾಲ್‌ನಲ್ಲಿ ದಿನದ 24 ಗಂಟೆಗಳು ಪಾಳಿಯಲ್ಲಿ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಗುರುವಾರ ಶವಪೆಟ್ಟಿಗೆ ಪಕ್ಕದಲ್ಲೇ ಭದ್ರತಾ ಸಿಬಂದಿಯೊಬ್ಬ ತಲೆತಿರುಗಿ ಬಿದ್ದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next