Advertisement

ವಲಸೆ ಕಾರ್ಮಿಕರಿಗೆ ಕ್ವಾರಂಟೈನ್‌

06:36 PM May 14, 2020 | Suhan S |

ಶಹಾಪುರ: ದೇಶದೆಲ್ಲೆಡೆ ಕೋವಿಡ್ ತನ್ನ ಕಬಂಧ ಬಾಹು ಚಾಚಿಕೊಂಡಿದ್ದು, ಜನರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಹೊರ ರಾಜ್ಯ, ಜಿಲ್ಲೆಗಳಿಗೆ ಗುಳೆ ಹೋಗಿದ್ದ ಜನ ವಾಪಸ್‌ ತವರಿಗೆ ಮರಳುತ್ತಿದ್ದಾರೆ.

Advertisement

ತಾಲೂಕಿಗೆ ಸೋಮವಾರ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಎಲ್ಲರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಹಲವರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ತಿಳಿಸಲಾಗಿದ್ದು, 215 ಜನರು ವಲಸೆ ಕಾರ್ಮಿಕರನ್ನು ಐಸೋಲೇಷನ್‌ ಕೇಂದ್ರದಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ಜಗನ್ನಾಥರಡ್ಡಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಮೊರಾರ್ಜಿ ಹಾಗೂ ಕಿತ್ತೂರು ವಸತಿ ಶಾಲೆಗಳಲ್ಲಿ ಐಸೋಲೇಷನ್‌ ಕೇಂದ್ರ ಸ್ಥಾಪಿಸಲಾಗಿದ್ದು, ವಲಸಿಗರನ್ನು 14 ದಿನಗಳ ಕಾಲ ಇಲ್ಲಿಯೇ ತಂಗಲುವ್ಯವಸ್ಥೆ ಮಾಡಲಾಗಿದೆ. ವಲಸಿಗರ ಎಲ್ಲರ ಆರೋಗ್ಯ ಸದೃಢವಾಗಿದ್ದು ಯಾವುದೇ ಆತಂಕ ಪಡಬೇಕಿಲ್ಲ. ಆದರೆ ಮುಂಜಾಗೃತವಾಗಿ ಕೋವಿಡ್‌-19 ನಿಯಮನುಸಾರ ಅವರನ್ನು ಕ್ವಾರಂಟೈನ್‌ ಮಾಡಬೇಕಿದೆ. ಅಲ್ಲದೆ ಕ್ವಾರಂಟೈನ್‌ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದರು. ಮಹಾರಾಷ್ಟ್ರದ ಸಾಂಗ್ಲಿ ಸೇರಿದಂತೆ ಇತರೆಡೆಯಿಂದ ವಲಸಿಗರು ಆಗಮಿಸಿದ್ದಾರೆ. ಇನ್ನು ಹೆಚ್ಚು ಜನರು ಬರುವ ನಿರೀಕ್ಷೆಯಿದ್ದು, ನಗರದ ಬೆನಕನಳ್ಳಿ ಗ್ರಾಮ ಬಳಿಯ ವಸತಿ ಶಾಲೆಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ.  ಬರುವ ವಲಸಿಗರಿಗೆ ಸೂಕ್ತ ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಮತ್ತು ಇತರೆಡೆಯಿಂದ ಆಗಮಿಸಿದ್ದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿ ಸದೃಢರಾಗಿದ್ದಾರೆ. ಇವರೆಲ್ಲರನ್ನು ಮುಂಜಾಗ್ರತವಾಗಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ನಿತ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಡಾ.ರಮೇಶ ಗುತ್ತೇದಾರ. –ತಾಲೂಕು ವೈದ್ಯಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next