Advertisement

ಗುಣಮಟ್ಟದ ಆಧಾರದಲ್ಲಿ ಸ್ತಬ್ಧ ಚಿತ್ರ ಆಯ್ಕೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

12:57 PM Jan 19, 2022 | Team Udayavani |

ಮೈಸೂರು: ಕಾಮಾಲೆ ಕಣ್ಣಿಗೆ ನೋಡುವುದೆಲ್ಲಾ ಹಳದಿ ಎಂಬಂತಾಗಿದೆ ಸಿದ್ದರಾಮಯ್ಯ ಅವರ ವರ್ತನೆ ಎಂದು ಸಂಸದ ಪ್ರತಾಪ್ ಸಿಂಹ  ತಿರುಗೇಟು ನೀಡಿದ್ದಾರೆ.

Advertisement

ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ಸಿಗದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿರುವ ಕುರಿತಾಗಿ ಪ್ರತಿಕ್ರಿಯಿಸಿದ ಸಂಸದ, ರಾಜ್ಯ ದಲ್ಲಿ ಕ್ಯಾಂಟಿನ್ ಗೆ ಹೆಸರಿಡುವಾಗ ಈ ನೆಲದ ಮಹಾ ಪುರುಷರ ಹೆಸರು ಅವರಿಗೆ ನೆನಪಾಗಲಿಲ್ಲ.ಸಿದ್ದರಾಮಯ್ಯ ಗೆ ಆಗ ನೆನಪಾಗಿದ್ದು ಇಂದಿರಾಗಾಂಧಿ ಹೆಸರು ಮಾತ್ರ.ಅಧಿಕಾರದಲ್ಲಿ ಇರುವಾಗ ಅವರಿಗೆ ಮಹಾನೀಯರು ನೆನಪಾಗುವುದಿಲ್ಲ. ಅಧಿಕಾರ ಹೋದ ಮೇಲೆ ಮಹಾನೀಯರು ನೆನಪಾಗುತ್ತಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ :ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ತಿರಸ್ಕೃತ ಟ್ಯಾಬ್ಲೋ ಪ್ರದರ್ಶನ

ನಾರಾಯಣ ಗುರುಗಳು, ಒನಕೆ ಓಬವ್ವ, ಮೈಸೂರು ಮಹಾರಾಜರು ಎಂದಿಗೂ ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಇದ್ದಾಗ ನೆನಪಾಗಲಿಲ್ಲ.ಈಗ ಭೂತದ ಬಾಯಲ್ಲಿ ಭಗವದ್ಗಿತೆ ಎಂಬಂತೆ ಮಹಾನೀಯರಿಗೆ ಗೌರವ ಕೊಡುವುದನ್ನು ನಮಗೆ ಹೇಳುತ್ತಿದ್ದಾರೆ ಎಂದರು.

ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿದ್ದಾರೆ. ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ಧ ಚಿತ್ರ ಮಾಡಿರುತ್ತಾರೋ ಆ ಗುಣಮಟ್ಟದ ಆಧಾರದ ಮೇಲೆ ಅದರ ಆಯ್ಕೆ ಆಗುತ್ತದೆ.ಆಯ್ಕೆ ಪ್ರಕ್ರಿಯೆ ಪಾರದಾರ್ಶಕವಾಗಿರುತ್ತೆ.ಇಲ್ಲಿ ಯಾರ ಅವಮಾನದ ಪ್ರಶ್ನೆಯೆ ಇರುವುದಿಲ್ಲ.ಸಿದ್ದರಾಮಯ್ಯ ಅವರು ಮೊದಲು ಗಣರಾಜ್ಯೋತ್ಸವದ ಸ್ತಬ್ಧ ಚಿತ್ರಗಳ ಮಾರ್ಗಸೂಚಿ ಓದಿಕೊಳ್ಳಲಿ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next