ಮಹಾನಗರ: ತುಂಬೆ ಹೆಲ್ತ್ ಕೇರ್‌ನ ವೈದ್ಯರ ವಾರ್ಷಿಕ 2024ನೇ ಸಾಲಿನ ಮಹಾಸಭೆ ಸಂದರ್ಭದಲ್ಲಿ ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಎಲ್ಡರ್ಲಿ ಮತ್ತು ದೀರ್ಘಾವಧಿ ಆರೈಕೆ ಕೇಂದ್ರದ ಉದ್ಘಾಟನೆ ನಡೆಯಿತು.
ತುಂಬೆ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ತುಂಬೆ ಮೊಯ್ದಿನ್ ಮಾತನಾಡಿ, ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಎಲ್ಡರ್ಲಿ ಮತ್ತು ಲಾಂಗ್-ಟರ್ಮ್ ಕೇರ್ 100 ಹಾಸಿಗೆಗಳನ್ನು ಒಳಗೊಂಡಿದೆ. ಹಿರಿಯರಿಗೆ ಗುಣಮಟ್ಟದ ಮತ್ತು ದೀರ್ಘಾವಧಿ ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ ತಜ್ಞ ವೈದ್ಯರು, ಸೂಕ್ತ ಮೂಲ ಆವಶ್ಯಕತೆಗಳನ್ನು ಜೋಡಿಸಲಾಗಿದೆ. ಹಿರಿಯರ ಆಗೋಗ್ಯ ಸುಧಾರಣೆ ನಮ್ಮ ಧ್ಯೇಯ ಎಂದರು.
ತುಂಬೆ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕºರ್ ಮೊಯ್ದಿàನ್ ತುಂಬೆ ಮಾತನಾಡಿ, ತುಂಬೆ ಹೆಲ್ತ್‌ಕೇರ್ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ. ಆರೋಗ್ಯ ರಕ್ಷಣೆಯಲ್ಲಿ ರೋಗಿಗಳ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಗುರಿ. ಹೊಸ ಅನ್ವೇಷಣೆ, ಸುಧಾರಿತ ತಂತ್ರಜ್ಞಾನ, ನಿಖರ ಮತ್ತು ಕಾಳಜಿಯೊಂದಿಗೆ ರೋಗಿಗಳಿಗೆ ಸೇವೆ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದರು.
ಸಾವಿರಕ್ಕಿಂತಲೂ ಅಧಿಕ ವೈದ್ಯರು ಹಾಜರಾಗಿದ್ದರು. ತುಂಬೆ ಹೆಲ್ತ್‌ಕೇರ್ ಖಾಸಗಿ ಶೈಕ್ಷಣಿಕ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಲ್ಯಾಬ್‌ಗಳು ಮತ್ತು ಫಾರ್ಮಸಿಗಳ ಅತಿದೊಡ್ಡ ನೆಟ್‌ವರ್ಕ್ ಹೊಂದಿದೆ. ಮಾಡರ್ನ್ ಫಾರ್ಮಾಸೆಟಿಕಲ್ ಕಂಪನಿಯ ಸಹಕಾರದಲ್ಲಿ ನಡೆದ ಸಭೆಯಲ್ಲಿ ಪ್ರಾಂತ್ಯದ ವೈದ್ಯಕೀಯ ತಜ್ಞರು, ನಾವೀನ್ಯತೆ ನಿಪುಣರು, ನಾಯಕರು ಭಾಗವಹಿಸಿದ್ದರು.
ಹಿರಿಯರಿಗೆ ಆರೋಗ್ಯ ಬೆಂಬಲ ನೀಡುವ ಉದ್ದೇಶದಿಂದ ಇನ್‌ಸ್ಟಿಟ್ಯೂಟ್ ಆಫ್ ಎಲ್ಡರ್ಲಿ ಅಂಡ್ ಲಾಂಗ್-ಟರ್ಮ್ ಕೇರ್ ಪ್ರಾರಂಭಿಸಲಾಯಿತು. ವಯಸ್ಸಾದವರ ಆರೋಗ್ಯ ರಕ್ಷಣೆಯ ಅಗತ್ಯ, ಯುಎಇ ಮತ್ತು ಅದರಾಚೆಗಿನ ರೋಗಿಗಳಿಗೆ ದೀರ್ಘಾವಧಿಯ ವೈದ್ಯಕೀಯ ಬೆಂಬಲ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಎಲ್ಡರ್ಲಿ ಮತ್ತು ಲಾಂಗ್-ಟರ್ಮ್ ಕೇರ್ ಸಮಗ್ರ ಆರೋಗ್ಯ ಸೇವೆಗಳನ್ನು ನೀಡಲು ತುಂಬೆ ಗ್ರೂಪ್ ಬದ್ಧವಾಗಿದೆ. ಹೊಸ ಸಂಸ್ಥೆಯು ಪ್ರದೇಶದಲ್ಲಿ ವೃದ್ಧರ ಆರೈಕೆ, ಪುನರ್ವಸತಿಗೆ ಮಾನದಂಡವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಸಹಾನುಭೂತಿ, ರೋಗಿಯ-ಕೇಂದ್ರಿತ ವಿಧಾನ ಒಳಗೊಂಡಿದೆ.
ತುಂಬೆ ಗ್ರೂಪ್‌ನ 26 ವರ್ಷಗಳ ಪರಂಪರೆಯನ್ನು ಎತ್ತಿ ತೋರಿಸುವ ಪ್ರಸ್ತುತಿಗಳು, ಗ್ರಾÂಂಡ್ ರಾಫೆಲ್ ಡ್ರಾ, ನೆಟ್‌ವರ್ಕಿಂಗ್ ಅವಕಾಶಗಳಂತಹ ಚಟುವಟಿಕೆಗಳು ನಡೆದವು.