ಬೆಂಗಳೂರು: ಪಾಶ್ಚಾತ್ಯ ದೇಶಗಳ ಶೇ 80 ರಷ್ಟು ಕಾರ್ಯಕ್ಷಮತೆಯುಳ್ಳ ವಸ್ತುಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ದೇಶದ ಕಂಪನಿಗಳು ಅನ್ವೇಷಣೆಗೆ ಮುಂದಾಗಬೇಕು ಎಂದು ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಅಭಿಪ್ರಾಯಪಟ್ಟರು.
ನ್ಯಾಶನಲ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಯಶಸ್ವಿ ಸ್ಟಾರ್ಟ್ ಅಪ್ ಕಂಪನಿಗಳ ಸಮ್ಮೇಳನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಅತ್ಯುತ್ತಮ ಕಾರ್ಯಕ್ಷಮತೆಯ ಉತ್ಪನ್ನಗಳನ್ನು ದೇಶಿಯ ಕಂಪನಿಗಳೇ ತಯಾರಿಸಲು ಸಾಧ್ಯವಾದರೆ, ಗ್ರಾಹಕರಿಗೆ ಆ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಲಿವೆ. ದೇಶದ ಗ್ರಾಹಕ ಬಯಕೆಯೂ ಇದೇ ಆಗಿದೆ. ಈ ನಿಟ್ಟಿನಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಹೊಸ ಅನ್ವೇಷಣೆಗೆ ತೆರೆದುಕೊಳ್ಳಬೇಕು. ಇದರಿಂದ ವಿಶ್ವದ ಆರ್ಥಿಕತೆಯಲ್ಲಿ ದೇಶ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು.
ಎನ್‌ಎಸ್‌ಇಎವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಲಿಮಯೆ ಮಾತನಾಡಿ,ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರಲಿರುವ ಕಂಪನಿಗಳು ಭಾರತದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿವೆ. ಬಂಡವಾಳ ಮಾರುಕಟ್ಟೆ ಹಾಗೂ ಪರಿಸರ ಸ್ನೇಹಿ ಸ್ಟಾರ್ಟ್ ಅಪ್ ಕಂಪನಿಗಳ ನಡುವಣ ಭಾಂಧ್ಯವಕ್ಕೆ ಈ ಸಮ್ಮೇಳನ ಸಹಕಾರಿಯಾಗಲಿದ್ದು, ಹೊಸ ಷೇರು ಮಾರುಕಟ್ಟೆಗಳು ಹೊಸ ಕಂಪನಿಗಳಿಗೆ ಪೂರಕ ಮಾರುಕಟ್ಟೆ ಸೃಷ್ಟಿಸುವ ಭರವಸೆ ನೀಡಿದರು.
ಇಡೀ ದಿನ ನಡೆದ ಸಮ್ಮೇಳನದಲ್ಲಿ ವಿವಿಧ ಕಂಪನಿಗಳ ಪ್ರತಿನಿಧಿಗಳು ಆಧುನಿಕ ತಂತ್ರಜ್ಞಾನವನ್ನು ದೇಶೀಯ ಮಾರುಕಟ್ಟೆಯನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವುದು. ಹೊಸ ಕಂಪನಿಗಳ ಮುಂದಿರುವ ಸವಾಲುಗಳನ್ನು ನಿವಾರಿಸುವ ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಯಿತು. ಷೇರು ಮಾರುಕಟ್ಟೆಯ ಸಹಕಾರದೊಂದಿಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುವ ಬಗ್ಗೆ ಚರ್ಚಿಸಲಾಯ್ತು.
ಸೆಬಿಯ ಮಾಜಿ ಅಧ್ಯಕ್ಷ ಸಿ.ಬಿ ಭಾವೆ,ಆರಿನ್ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ಟಿ. ವಿ ಮೋಹನದಾಸ್ ಪೈ, ಸೇರಿದಂತೆ 150 ಕ್ಕೂ ಸ್ಟಾರ್ಟ್ ಅಪ್ ಕಂಪನಿಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.