Advertisement

L.S Polls: ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಮದ್ಯ.. ಮತದಾರರಿಗೆ ವಿಶಿಷ್ಟ ಭರವಸೆ ನೀಡಿದ ಟಿಡಿಪಿ

01:29 PM Apr 08, 2024 | Team Udayavani |

ಆಂಧ್ರಪ್ರದೇಶ: ಚುನಾವಣೆ ಸಮೀಪ ಬರುತ್ತಿದ್ದಂತೆ ಪಕ್ಷಗಳು ಅಧಿಕಾರಕ್ಕೆ ಬರಬೇಕೆಂದು ನಾನಾ ರೀತಿಯ ಆಮಿಷಗಳನ್ನು ಮತದಾರರಿಗೆ ನೀಡುತ್ತಾರೆ ಅದರಂತೆ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ನೇತೃತ್ವದ ಪ್ರತಿ ಪಕ್ಷವು ವಿಧಾನಸಭೆ ಚುನಾವಣೆ ಮತ್ತು ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ವಿಶಿಷ್ಟ ಭರವಸೆಯೊಂದನ್ನು ನೀಡಿದೆ.

Advertisement

ತೆಲುಗು ದೇಶಂ ಪಕ್ಷ ಮತದಾರರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಮದ್ಯ ನೀಡುವ ಭರವಸೆ ನೀಡಿ ಮತದಾರರನ್ನು ಓಲೈಸಲು ಯತ್ನಿಸಿದ್ದಾರೆ.

ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿದ್ದು ಅದರಂತೆ ಕುಪ್ಪಂನಲ್ಲಿ ಇತ್ತೀಚೆಗೆ ನಡೆದ ರಾಲಿಯಲ್ಲಿ ಮತದಾರರಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಮದ್ಯ ನೀಡುವ ಭರವಸೆ ನೀಡಿದ್ದಾರೆ.

ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ಮತದಾರರಾದ ನೀವು ನನ್ನನ್ನು ಗೆಲ್ಲಿಸಿದಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡುವ ಜೊತೆಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಮದ್ಯವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಎಲ್ಲ ವಸ್ತುಗಳ ಬೆಲೆಗಳು ಹೆಚ್ಚಾಗಿದ್ದು ಜನ ಸಾಮಾನ್ಯರಿಗೆ ಇದರಿಂದ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ ಹಾಗಾಗಿ ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಈ ಎಲ್ಲ ತೊಂದರೆಗಳು ಕಡಿಮೆಯಾಗಲಿವೆ ನೀವೇ ಯೋಚಿಸಿ ಎಂದು ಮತದಾರರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: 5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ; ಕರ್ನಾಟಕ ಸರ್ಕಾರಕ್ಕೆ ತರಾಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next