Advertisement

ಗುಣಾತ್ಮಕ ಶಿಕ್ಷಣಕ್ಕೆ ಪೋಷಕರ ಸಹಕಾರ ಅಗತ್ಯ: ನಿಂಬಣ್ಣವರ

11:57 AM Jun 03, 2019 | Suhan S |

ಕಲಘಟಗಿ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದು ಸರ್ಕಾರ ಹಾಗೂ ಪೋಷಕರ ಕರ್ತವ್ಯವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಇದಕ್ಕೆ ಪೋಷಕರೆಲ್ಲರ ಸಹಕಾರ ಅತೀ ಅವಶ್ಯ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

Advertisement

ಹಿರೇಹೊನ್ನಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಾಮಾನ್ಯ ಮತ್ತು ವಿಶೇಷ ದಾಖಲಾತಿ ಆಂದೋಲನದ ಪ್ರಯುಕ್ತ ಅಕ್ಷರ ಬಂಡಿಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಲ್ಲಿನ ಕಲಿಕೆಗಿಂತಲೂ ಉತ್ಕೃಷ್ಟವಾದ ಬೋಧನೆ ಮಾಡುವ ಕೌಶಲ ಹೊಂದಿದ ಶಿಕ್ಷಕ ಬಳಗ ಇದೆ. ಇದರ ಸದುಪಯೋಗವನ್ನು ಎಲ್ಲ ಪೋಷಕರು ಪಡೆದುಕೊಂಡು ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ಸಹದೇವಪ್ಪ ಧನಿಗೊಂಡ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ, ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಶಂಕ್ರವ್ವ ಮಡ್ಲಿ, ಬಸವರಾಜ ಮಾದಿ, ರಾಮಣ್ಣ ಬಮ್ಮಿಗಟ್ಟಿ, ಉಮೇಶ ಚಿಕ್ಕಣ್ಣವರ, ಶಿವಾನಂದ ಮಾದಿ, ರಾಜು ಚಿಕ್ಕಮಠ, ಶಿಕ್ಷಣ ಸಂಯೋಜಕ ಪುಟ್ಟಣ್ಣ ಭಜಂತ್ರಿ, ಸಿಆರ್‌ಪಿ ತಬಸ್ಸುಂ ಪಾಲ್ಗೊಂಡಿದ್ದರು. ಮಂಜುಳಾ ಅಂಬಿಗೇರ ಸ್ವಾಗತಿಸಿದರು. ಎಸ್‌.ಎಲ್. ದಾಸರ ವಂದಿಸಿದರು. ಆರಂಭದಲ್ಲಿ ವಿದ್ಯಾರ್ಥಿಗಳು, ಗಣ್ಯರು ಹಾಗೂ ಎಲ್ಲ ಶಿಕ್ಷಕರೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಅಕ್ಷರ ಬಂಡಿಯ ಮೆರವಣಿಗೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next