Advertisement
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಒಸ್ಟಾಪೆಂಕೊ ರೊಮೇನಿಯದ ಮಿಹೆಲಾ ಬುಜರ್ನೆಸ್ಕಾ ಅವರನ್ನು 6-1, 4-6, 6-2 ಸೆಟ್‌ಗಳಿಂದ ಸೋಲಿಸಿದರು.
5ನೇ ಶ್ರೇಯಾಂಕಿತೆ ಕಿಕಿ ಬರ್ಟೆನ್ಸ್ ಇಟಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ 0-6, 7-6 (9-7), 6-4 ಸೆಟ್‌ಗಳಿಂದ ಗೆದ್ದರು. ಮೊದಲ ಸೆಟ್‌ನಲ್ಲಿ ಕಿಕಿ ಬರ್ಟೆನ್ಸ್‌ಗೆ ಒಂದೂ ಅಂಕ ಒಲಿದಿರಲಿಲ್ಲ. ದ್ವಿತೀಯ ಸೆಟ್ ಟೈ ಬ್ರೇಕರ್‌ಗೆ ವಿಸ್ತರಣೆಗೊಂಡಿತು. ಇದನ್ನು ಬರ್ಟೆನ್ಸ್ ತಮ್ಮದಾಗಿಸಿಕೊಂಡರು. ಅದೃಷ್ಟವನ್ನು ಒಲಿಸಿಕೊಂಡರು. ಮುಂದಿನ ಪಂದ್ಯದಲ್ಲಿ ಅವರು 2016ರ ಚಾಂಪಿಯನ್ ಕಾರ್ಲಾ ಸೂರೆಜ್ ನವಾರೊ ವಿರುದ್ಧ ಆಡಲಿದ್ದಾರೆ.
Related Articles
7ನೇ ಶ್ರೇಯಾಂಕಿತೆ ಅನಾಸ್ತಾಸಿಜಾ ಸೆವಸ್ತೋವಾ ಮೊದಲ ಸುತ್ತಿನಲ್ಲೇ ಅಘಾತ ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಅವರು ಅರ್ಹತಾ ಆಟಗಾರ್ತಿ, ರಶ್ಯದ ಅನ್ನಾ ಬ್ಲಿಂಕೋವಾ ವಿರುದ್ಧ 6-7 (5-7), 4-6 ಅಂತರದಿಂದ ಪರಭಾವಗೊಂಡರು.
Advertisement
ಕೂಟದಿಂದ ಹಿಂದೆ ಸರಿದ ಕ್ಯಾರೋಲಿನ್ ವೋಜ್ನಿಯಾಕಿ ಬದಲಿಗೆ ಅವಕಾಶ ಪಡೆದ ಆಸ್ಟ್ರೇಲಿಯದ ಸ್ಯಾಮ್ ಸ್ಟೋಸರ್ ಮೊದಲ ಪಂದ್ಯದಲ್ಲೇ ಅರ್ಹತಾ ಆಟಗಾರ್ತಿ, ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಖೋವಾ ವಿರುದ್ಧ 4-6, 2-6ರಿಂದ ಸೋತರು.