Advertisement

ಫಿಫಾ ವಿಶ್ವಕಪ್‌: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ನೆದರ್ಲೆಂಡ್ಸ್‌ , ಸೆನೆಗಲ್‌

11:27 PM Nov 29, 2022 | Team Udayavani |

ದೋಹಾ: ಫಿಫಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ “ಎ’ ವಿಭಾಗದ ಲೆಕ್ಕಾಚಾರ ಮುಗಿದಿದೆ. ನೆದರ್ಲೆಂಡ್ಸ್‌ ಮತ್ತು ಸೆನೆಗಲ್‌ ತಂಡಗಳು ಪ್ರಿ-ಕ್ವಾರ್ಟರ್‌ ಫೈನಲ್‌ ಸುತ್ತಿಗೆ ಲಗ್ಗೆ ಹಾಕಿವೆ.

Advertisement

ಮಂಗಳವಾರ ರಾತ್ರಿ ಏಕಕಾಲಕ್ಕೆ ಮೊದಲ್ಗೊಂಡ ಎರಡು ಮುಖಾಮುಖೀಗಳಲ್ಲಿ ನೆದರ್ಲೆಂಡ್ಸ್‌ 2-0 ಅಂತರದಿಂದ ಆತಿಥೇಯ ಕತಾರ್‌ಗೆ ಹೊಡೆತವಿಕ್ಕಿತು.

ಈಗಾಗಲೇ ಕೂಟದಿಂದ ನಿರ್ಗಮಿಸಿರುವ ಕತಾರ್‌ ಹ್ಯಾಟ್ರಿಕ್‌ ಸೋಲಿನೊಂದಿಗೆ ತನ್ನ ವಿಶ್ವಕಪ್‌ ಆಟವನ್ನು ಅತ್ಯಂತ ನೀರಸವಾಗಿ ಮುಗಿಸಿತು. ಡಚ್‌ ಗೋಲುವೀರರೆಂದರೆ ಕೋಡಿ ಗಾಪ್ಕೊ (26ನೇ ನಿಮಿಷ) ಹಾಗೂ ಫ್ರೆಂಕಿ ಡಿ ಜಾಂಗ್‌ (49ನೇ ನಿಮಿಷ). ಒಂದು ಡ್ರಾ, 2 ಜಯದೊಂದಿಗೆ 7 ಅಂಕ ಗಳಿಸಿದ ನೆದರ್ಲೆಂಡ್ಸ್‌ “ಎ’ ವಿಭಾಗದ ಅಗ್ರಸ್ಥಾನ ಅಲಂಕರಿಸಿತು.

ಸೆನೆಗಲ್‌ ಗೆಲುವು
ಈಕ್ವಡಾರ್‌-ಸೆನೆಗಲ್‌ ಪಂದ್ಯ ಹೆಚ್ಚು ಪೈಪೋಟಿಯಿಂದ ಕೂಡಿತ್ತು. ಇದನ್ನು ಸೆನೆಗಲ್‌ 2-1ರಿಂದ ಜಯಿಸಿತು. ಇದು ಸೆನೆಗಲ್‌ಗೆ ಒಲಿದ 2ನೇ ಜಯ. ಅದು ಒಟ್ಟು 6 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಯಿತು. ಸೆನೆಗಲ್‌ ಪರ ಇಸ್ಮಾಯಿಲ್‌ ಸರ್ರ (44ನೇ ನಿಮಿಷ) ಮತ್ತು ಕಲಿದು ಕಲಿಬಲಿ (70ನೇ ನಿಮಿಷ) ಗೋಲು ಬಾರಿಸಿದರು. ಈಕ್ವಡಾರ್‌ನ ಏಕೈಕ ಗೋಲನ್ನು 67ನೇ ನಿಮಿಷದಲ್ಲಿ ಮೊಸಸ್‌ ಕೈಸೆಡೊ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next