Advertisement

ಭಾರತ, ಲಂಡನ್ ನಲ್ಲಿ ಟೆರರ್ ಅಟ್ಯಾಕ್ ಹಿಂದೆ ಇರಾನ್ ಕಮಾಂಡರ್ ಕೈವಾಡ; ಡೊನಾಲ್ಡ್ ಟ್ರಂಪ್

10:34 AM Jan 05, 2020 | Nagendra Trasi |

ಲಾಸ್ ಏಂಜಲೀಸ್:ಅಮೆರಿಕದ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾದ ಇರಾನ್ ಭದ್ರತಾ ಪಡೆಯ ನಾಯಕ ಖಾಸಿಮ್ ಸೊಲೆಮನಿ ಭಾರತ ಮತ್ತು ಲಂಡನ್ ನಲ್ಲಿ ಭಯೋತ್ಪಾದಕ ದಾಳಿಯ ಸೂತ್ರಧಾರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

Advertisement

ಶುಕ್ರವಾರ ಫ್ಲೋರಿಡಾದ ಪಾಮ್ ಬೀಚ್ ನ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಸೊಲೆಮನಿಯ ಭಯೋತ್ಪಾದಕ ಆಡಳಿತ ಅಂತ್ಯಗೊಂಡಂತಾಗಿದೆ ಎಂದು ಘೋಷಿಸಿದ್ದರು.

ಸೊಲೆಮನಿಯ ಅಸ್ವಸ್ಥ ಮನಸ್ಥಿತಿಯಿಂದಾಗಿ ಭಾರತ ಮತ್ತು ಲಂಡನ್ ನಲ್ಲಿ ಉಗ್ರ ದಾಳಿಗೆ ಕುಮ್ಮಕ್ಕು ನೀಡುವ ಮೂಲಕ ಅಮಾಯಕ ಜನರು ಪ್ರಾಣಕಳೆದುಕೊಳ್ಳುವಂತಾಗಿತ್ತು. ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸೊಲೆಮನಿಯನ್ನು ಮಿಸೈಲ್ ದಾಳಿ ಮೂಲಕ ಹತ್ಯೆಗೈಯಲು ಆದೇಶ ನೀಡಿರುವುದಾಗಿ ಹೇಳಿದರು.

ಸೊಲೆಮನಿಯ ಕಿರುಕುಳಕ್ಕೆ ಒಳಗಾದ ಸಂತ್ರಸ್ಥರಿಗೆ ನಾವು ಗೌರವ ಕೊಡಬೇಕಾಗಿದೆ. ಹೀಗಾಗಿ ಸೊಲೆಮನಿ ಉಗ್ರ ಚಟುವಟಿಕೆ ಕೊನೆಗಾಣಿಸಿದ್ದೇವೆ. ಆದರೆ ಭಾರತದಲ್ಲಿ ಸೊಲೆಮನಿ ಕೈವಾಡ ಇರುವ ದಾಳಿ ಯಾವುದು ಎಂಬುದನ್ನು ಖಚಿತವಾಗಿ ಹೇಳಿಲ್ಲ. ಬಹುಶ 2012ರಲ್ಲಿ ಭಾರತದಲ್ಲಿ ಇಸ್ರೇಲಿ ರಕ್ಷಣಾ ಅಧಿಕಾರಿಯ ಪತ್ನಿಯ ಕಾರಿನ ಮೇಲೆ ನಡೆಸಿದ ಬಾಂಬ್ ದಾಳಿ ಇದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next