ತೀರ್ಥಹಳ್ಳಿ: ಪಟ್ಡಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ ಹದಿನಾಲ್ಕರ ಕುರುವಳ್ಳಿ ಗಣಪತಿ ಪೆಂಡಲ್ ಹಿಂಭಾಗ ತುಂಗಾ ನದಿಯಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಬೃಹತ್ ಗಾತ್ರದ ಹನ್ನೆರಡು ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಹೆಬ್ಬಾವು ಇರುವ ವಿಷಯ ತಿಳಿಯುತ್ತಿದ್ದಂತೆ ಜನರು ಹೆಬ್ಬಾವು ನೋಡಲು ನದಿಯ ಸಮೀಪ ಬರುತ್ತಿದ್ದಾರೆ ಎನ್ನಲಾಗಿದೆ.
ನದಿಯಲ್ಲಿ ಹೆಬ್ಬಾವು ಇರುವ ವಿಷಯ ಈಗಾಗಲೇ ಕುರುವಳ್ಳಿಯ ಪ್ರಮೋದ್ ಪೂಜಾರಿ ಮತ್ತು ಸಂಗಡಿಗರು ಹಾಗೂ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು.
ನದಿ ತೀರಕ್ಕೆ ಬಂದ ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟು ಹೆಬ್ಬಾವನ್ನು ಸೆರೆಹಿಡಿದ್ದಾರೆ.
ಇದನ್ನೂ ಓದಿ: Soujanya Case: ಮರು ತನಿಖೆಗೆ ಆಗ್ರಹಿಸಿ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ಧರಣಿ