Advertisement

ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು

03:23 PM Aug 08, 2022 | Team Udayavani |

ಬರ್ಮಿಂಗಂ: ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಕೆನಡಾದ ಆಟಗಾರ್ತಿಯನ್ನು ನೇರ ಸೆಟ್ ಗಳಿಂದ ಸೋಲಿಸಿದ ಪಿ.ವಿ.ಸಿಂಧು ಬಂಗಾರದ ಪದಕಕ್ಕೆ ಮುತ್ತಿಕ್ಕಿದರು.

Advertisement

ಕೆನಡಾದ ಆಟಗಾರ್ತಿ ಮಿಚೆಲ್ ಲಿ ವಿರುದ್ಧ ಮೇಲುಗೈ ಸಾಧಿಸಿದ ಪಿ.ವಿ.ಸಿಂಧು ಅವರು 21-15, 21-13 ನೇರ ಗೇಮ್‌ ಗಳಲ್ಲಿ ಪಂದ್ಯ ಗೆದ್ದರು. ಈ ಮೂಲಕ ತನ್ನ ಮೊದಲ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ಪಡೆದರು.

ಸಿಂಧು ಅವರು ಸೆಮಿ ಫೈನಲ್ ನಲ್ಲಿ ಸಿಂಗಾಪುರದ ಯೆಯೊ ಜಿಯಾ ಮಿನ್‌ ಅವರನ್ನು 21-19, 21-17 ಗೇಮ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿ ಫೈನಲಿಗೇರಿದ್ದರು.

ಇದನ್ನೂ ಓದಿ:ಬಿಜೆಪಿಯವರಿಗೆ ತಾಕತ್ತಿದ್ದರೆ ಸಿದ್ದರಾಮೋತ್ಸವದ ಅರ್ಧದಷ್ಟು ಜನ ಸೇರಿಸಲಿ: ಎಂ ಬಿ ಪಾಟೀಲ್

ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ ಸೇನ್ ಕೂಡಾ ಫೈನಲ್ ಗೇರಿದ್ದಾರೆ. ವಿಶ್ವದ 10ನೇ ರ್‍ಯಾಂಕಿನ ಲಕ್ಷ್ಯ ಸೇನ್‌ ಸಿಂಗಾಪುರದ ಜಿಯಾ ಹೆಂಗ್‌ ತೇಹ್‌ ಅವರನ್ನು 21-10, 18-21, 21-16 ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಫೈನಲಿಗೇರಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next