Advertisement

ವಿಶ್ವ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಸಿಂಧು

09:26 PM Dec 16, 2021 | Team Udayavani |

ವೆಲ್ವಾ (ಸ್ಪೇನ್‌): ಥಾಯ್ಲೆಂಡ್‌ನ‌ ಪಾರ್ನ್ಪಾವೀ ಚೊಚುವಾಂಗ್‌ ಅವರನ್ನು ಪರಾಭವಗೊಳಿಸಿದ ಪಿ.ವಿ.ಸಿಂಧು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

Advertisement

ಗುರುವಾರ ನಡೆದ 48 ನಿಮಿಷಗಳ ಪ್ರೀಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ವಿಶ್ವದ 7ನೇ ಶ್ರೇಯಾಂಕಿತೆ ಪಿ.ವಿ.ಸಿಂಧು 21-14, 21-18 ನೇರ ಗೇಮ್‌ಗಳಿಂದ ಥಾಯ್‌ ಆಟಗಾರ್ತಿಯನ್ನು ಮಣಿಸಿದರು. ಚೊಚುವಾಂಗ್‌ ಎದುರಿನ ಗೆಲುವಿನ ಅಂತರವನ್ನು 5-3ಕ್ಕೆ ವಿಸ್ತರಿಸಿದರು. ಇದಕ್ಕೂ ಹಿಂದಿನ ಈ ವರ್ಷದ 2 ಮುಖಾಮುಖೀಗಳಲ್ಲಿ ಸಿಂಧು ಈಕೆಯೆದುರು ಪರಾಭವಗೊಂಡಿದ್ದರು.

ಸಿಂಧು ಅವರಿನ್ನು ವಿಶ್ವದ ನಂ.1 ಆಟಗಾರ್ತಿ, ಚೀನಾ ತೈಪೆಯ ತೈ ಜು ಯಿಂಗ್‌ ಅವರನ್ನು ಎದುರಿಸಲಿದ್ದಾರೆ. ಅವರು ಸ್ಕಾಟ್ಲೆಂಡಿನ ಕಸ್ಟಿì ಗಿಲ್ಮೋರ್‌ ವಿರುದ್ಧ 21-10, 19-21, 21-11 ಅಂತರದ ಜಯ ದಾಖಲಿಸಿದರು. ಮೊದಲ ಸುತ್ತಿನ ಬೈ ಪಡೆದಿದ್ದ ಸಿಂಧು, ದ್ವಿತೀಯ ಸುತ್ತಿನಲ್ಲಿ ಸ್ಲೊವೇಕಿಯದ ಮಾರ್ಟಿನಾ ರೆಪಿಸ್ಕಾ ಅವರನ್ನು 21-7, 21-9 ಅಂತರದಿಂದ ಪರಾಭವಗೊಳಿಸಿದ್ದರು.

ಡಬಲ್ಸ್‌ನಲ್ಲಿ ಸೋಲು: ಭಾರತದ ಪುರುಷರ ಹಾಗೂ ಡಬಲ್ಸ್‌ ಜೋಡಿಗಳೆರಡೂ ಪರಾಭವಗೊಂಡವು. ಪುರುಷರ ವಿಭಾಗದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ, ವನಿತಾ ವಿಭಾಗದ ಅಶ್ವಿ‌ನಿ ಪೊನ್ನಪ್ಪ-ಎನ್‌.ಸಿಕ್ಕಿ ರೆಡ್ಡಿ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದರು.

Advertisement

Udayavani is now on Telegram. Click here to join our channel and stay updated with the latest news.

Next