Advertisement

ಉಬೆರ್‌ ಕಪ್‌: ಹೊರಬಿದ್ದ ಭಾರತ 

10:19 PM May 12, 2022 | Team Udayavani |

ಬ್ಯಾಂಕಾಕ್‌: ಪಿ.ವಿ. ಸಿಂಧು ನೇತೃತ್ವದ ಭಾರತ ತಂಡ “ಉಬೆರ್‌ ಕಪ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಹೊರಬಿದ್ದಿದೆ. ಗುರುವಾರದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಥಾಯ್ಲೆಂಡ್‌ 3-0 ಅಂತರದಿಂದ ಭಾರತವನ್ನು ಪರಾಭವಗೊಳಿಸಿತು.

Advertisement

ವನಿತೆಯರ ಮೊದಲ ಸಿಂಗಲ್ಸ್‌ ನಲ್ಲಿ ರಚನಾಕ್‌ ಇಂತಾನನ್‌ ವಿರುದ್ಧ ಪಿ.ವಿ. ಸಿಂಧು ಪರಾಭವಗೊಂಡದ್ದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ವಿಶ್ವದ 8ನೇ ರ್‍ಯಾಂಕಿಂಗ್‌ ಆಟಗಾರ್ತಿ ಇಂತಾನನ್‌ ಈ ಪಂದ್ಯವನ್ನು 18-21, 21-17, 21-12 ಅಂತರದಿಂದ ಗೆದ್ದರು. ಇದು ಸಿಂಧು ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಥಾಯ್‌ ಆಟಗಾರ್ತಿ ಸಾಧಿಸಿದ 7ನೇ ಗೆಲುವು.

ವನಿತಾ ಡಬಲ್ಸ್‌ ಬಲ್ಲೂ ಭಾರತಕ್ಕೆ ಯಶಸ್ಸು ಒಲಿಯಲಿಲ್ಲ. ಶ್ರುತಿ ಮಿಶ್ರಾ- ಸಿಮ್ರಾನ್‌ ಸಿಂ  16-21, 13-21 ಅಂತರದಲ್ಲಿ ಜೊಂಕೋಲ್ಫನ್‌ ಕಿಟಿತರ ಕುಲ್‌-ರವಿಂಡಾ ಪ್ರಜೋಂಗ್‌ಜಾಯ್‌ ಜೋಡಿಗೆ ಶರಣಾದರು.

ದ್ವಿತೀಯ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌ ಅವರನ್ನು ಪೋರ್ಣಪವೀ ಚೊಚುವಾಂಗ್‌ 16-21, 11-21ರಿಂದ ಹಿಮ್ಮೆಟ್ಟಿಸಿದರು. ಇದರೊಂದಿಗೆ ಥಾಯ್ಲೆಂಡ್‌ 3-0 ಮುನ್ನಡೆ ಸಾಧಿಸಿದ್ದರಿಂದ ಉಳಿದೆರಡು ಪಂದ್ಯಗಳನ್ನು ಕೈಬಿಡಲಾಯಿತು. ಇಲ್ಲಿ ತನಿಷಾ ಕ್ರಾಸ್ಟೊ-ತಿೃಷಾ ಜಾಲಿ ಡಬಲ್ಸ್‌ ಹಾಗೂ ಅಶ್ಮಿತಾ ಚಾಲಿಹಾ ಸಿಂಗಲ್ಸ್‌ ಪಂದ್ಯವನ್ನು ಆಡಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next