Advertisement

ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆ

01:39 PM Jul 30, 2021 | Team Udayavani |

ಪುತ್ತೂರು : ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆಯಾಗಿದೆ. ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಮೂಡಾಯೂರು ಎಂಬಲ್ಲಿಯ ಶಶಿ ಪೂಜಾರಿ ಮುಂಬೈಯಲ್ಲಿ ಮೃತಪಟ್ಟವರು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹ ತರಲು ಇದೀಗ ಅವರ ಸಂಬಂಧಿಕರು ಮುಂಬೈಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

‘ಮಹಾರಾಷ್ಟ್ರದ ಬಾಂದ್ರಾಪೂರ್ವದ ಎವರ್ ಗ್ರೀನ್ ಹೋಟೇಲ್ ಬಳಿ ಕಳೆದ 35 ವರ್ಷಗಳಿಂದ ಪಾನ್ ಬೀಡ ಅಂಗಡಿ ಹೊಂದಿದ್ದ ಶಶಿ ಪೂಜಾರಿ ಮೃತಪಟ್ಟಿದ್ದಾರೆ. ಇವರು ತಾನು ದಕ್ಷಿಣ ಕನ್ನಡದ ಪುತ್ತೂರಿನವರು ಎಂದು ನಮ್ಮಲ್ಲಿ ಹೇಳಿ ಕೊಳ್ಳುತ್ತಿದ್ದರು. ನನ್ನ ಸಹೋದರ, ಸಹೋದರಿ ಪುತ್ತೂರಿನಲ್ಲಿ ಇದ್ದಾರೆ ಎಂದು ತಿಳಿಸಿದ್ದರು.

ಇದನ್ನೂ ಓದಿ : ಶಾಸಕ ಮತ್ತಿಮಡುಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮೆರವಣಿಗೆ, ದೀರ್ಘದಂಡ ನಮಸ್ಕಾರ

ಇವರ ವಾರಿಸುದಾರರು ಯಾರಾದರು ಇದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ’ ಎಂದು ಕೆಲವು ದಿನಗಳಿಂದ ಮೃತರ ಭಾವಚಿತ್ರ ಹಾಗೂ ಮುಂಬೈಯಲ್ಲಿರುವ ಕೆಲವರ ಮೊಬೈಲ್ ಫೋನ್ ನಂಬರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪ್ರಸಾರವಾಗುತ್ತಿತ್ತು.‌

ಮುಂಬೈಯಲ್ಲಿ ಮೃತರಾಗಿರುವ ಪುತ್ತೂರಿನವರು ಯಾರಾಗಿರಬಹುದು ಎಂದು ವ್ಯಾಪಕ ಕುತೂಹಲ ಸೃಷ್ಠಿಸಿತ್ತು. ಇದೀಗ ಅವರ ಗುರುತು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರದ ಆಧಾರದಲ್ಲಿ ಅವರನ್ನು ಅವರ ಮನೆಯವರು ಗುರುತು ಪತ್ತೆ ಹಚ್ಚಿದ್ದಾರೆ.

Advertisement

ಮೂಡಾಯೂರಿನ ಲಕ್ಷ್ಮಿ ಮತ್ತು ನಾಗಪ್ಪ ಪೂಜಾರಿಯವರ ಪುತ್ರ ಶಶಿಪೂಜಾರಿ ಯಾನೆ ಶಿವಪ್ಪ ಪೂಜಾರಿ(55ವ)ಯವರೇ ಮುಂಬೈಯಲ್ಲಿ ಮೃತಪಟ್ಟ ವ್ಯಕ್ತಿ ಎಂಬುದು ಇದೀಗ ಗೊತ್ತಾಗಿದೆ.‌ 35 ವರ್ಷಗಳ ಹಿಂದೆ ಉದ್ಯೋಗ ಅರಸಿ ಇವರು ಮುಂಬೈಗೆ ಹೋಗಿದ್ದವರು ಮತ್ತೆ ಇತ್ತ ಬಂದಿರಲಿಲ್ಲ, ಮನೆಯವರ ಜತೆ ಸಂಪರ್ಕವೂ ಹೊಂದಿರಲಿಲ್ಲ.

ಪ್ರಾರಂಭದಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದ ಮನೆಯವರು ಬಳಿಕ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದರು. ಅವಿವಾಹಿತರಾಗಿದ್ದ ಇವರು ತಾನು ಮುಂಬೈಯಲ್ಲಿ ಹೊಂದಿದ್ದ ಪಾನ್‌ಬೀಡ ಅಂಗಡಿಯ ಬಳಿ ರೂಮೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಮೃತ ಶಶಿ ಪೂಜಾರಿಯವರ ಸಹೋದರ, ಬನ್ನೂರು ಗ್ರಾಮ ಪಂಚಾಯತ್ ಸದಸ್ಯರೂ, ನಾಟಕ ಕಲಾವಿದರೂ ಆಗಿರುವ ಮೂಡಾಯೂರು ತಿಮ್ಮಪ್ಪ ಪೂಜಾರಿ ಮತ್ತು ಅವರ ಆಪ್ತರು ಮುಂಬೈಗೆ ತೆರಳಿದ್ದಾರೆ.

ಇದನ್ನೂ ಓದಿ : ಉತ್ತರಕನ್ನಡದಲ್ಲಿರೋ ಈ ಅಪರೂಪದ ರಮಣೀಯ ಜಲಪಾತಕ್ಕೆ ಭೇಟಿ ನೀಡಿದ್ದೀರಾ?

Advertisement

Udayavani is now on Telegram. Click here to join our channel and stay updated with the latest news.

Next