Advertisement

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

08:51 PM Nov 28, 2024 | Team Udayavani |

ಪುತ್ತೂರು: ನೆಟ್ಟಣಿಗೆ ಮುಟ್ನೂರು ಕೊಟ್ಯಾಡಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿ ಮಹಿಳೆ ಬೈಕ್‌ ಢಿಕ್ಕಿ ಹೊಡೆದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರನಿಗೆ ನ್ಯಾಯಲಯ ದಂಡ ವಿಧಿಸಿದ್ದು, ಬೈಕ್‌ ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

2022ರ ಫೆ.27ರಂದು ನೆಟ್ಟಣಿಗೆಯ ಕೊಟ್ಯಾಡಿಯಲ್ಲಿ ಮುಳಿಯೂರು ನಿವಾಸಿ ಶಾಹೀದ್‌ ಚಲಾಯಿಸುತ್ತಿದ್ದ ಕೇರಳ ರಾಜ್ಯದ ನೋಂದಣಿಯ ಬೈಕ್‌ ದುಗ್ಗಮ್ಮ (55) ಅವರಿಗೆ ಢಿಕ್ಕಿ ಹೊಡೆದಿತ್ತು. ಅಪಘಾತಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸವಾರ ಶಾಹೀದ್‌ ಮತ್ತು ಬೈಕ್‌ ಮಾಲಕ ಮಹಮ್ಮದ್‌ ಶಾಕೀರ್‌ ವಿರುದ್ಧ ಸೆಕ್ಷನ್‌ 279, 338, 304(ಎ)1 ರಂತೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್‌ ವೈ.ಎಚ್‌.ಅವರ ಪೀಠ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರ ಶಾಹೀದ್‌ಗೆ 5 ಸಾ.ರೂ. ದಂಡ, ಬೈಕ್‌ ಮಾಲಕ ಮಹಮ್ಮದ್‌ ಶಾಕೀರ್‌ಗೆ 2 ವರ್ಷ ಜೈಲು ಶಿಕ್ಷೆ ಮತ್ತು 5 ಸಾ. ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್‌ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next