Advertisement

ಪುತ್ತೂರು ತಾಲೂಕು: ಶೇ.119 ಸಾಧನೆ

09:19 AM May 15, 2022 | Team Udayavani |

ಪುತ್ತೂರು: 2021-22 ನೇ ಆರ್ಥಿಕ ವರ್ಷದಲ್ಲಿ ತಾಲೂಕಿನ 22 ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಗುರಿ ಮೀರಿದ ಸಾಧನೆ ತೋರಲಾಗಿದೆ.

Advertisement

ಕಳೆದ ಆರ್ಥಿಕ ವರ್ಷದಲ್ಲಿ 1,78,322 ಮಾನವ ದಿನಗಳ ಸೃಜನೆಯ ಗುರಿ ನಿಗದಿಪಡಿಸಿತ್ತು 2,11,602 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.119 ಗುರಿ ಸಾಧಿಸಿದೆ.

ಗ್ರಾ.ಪಂ.ಗಳ ಸಾಧನೆ

ತಾಲೂಕಿನಲ್ಲಿ 13,890 ಕುಟುಂಬಗಳು ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿದೆ. ಈ ಬಾರಿ ಹಿರೇಬಂಡಾಡಿ ಗ್ರಾ.ಪಂ. 18,960, ಮುಂಡೂರು ಗ್ರಾ.ಪಂ. 16,577, ಬಜತ್ತೂರು ಗ್ರಾ.ಪಂ. 16,333, ನರಿಮೊಗ್ರು ಗ್ರಾ.ಪಂ.14,627, ಬಲ್ನಾಡು ಗ್ರಾ.ಪಂ. 12,870, ಅರಿಯಡ್ಕ ಗ್ರಾ.ಪಂ. 10,831, ಬೆಟ್ಟಂಪಾಡಿ ಗ್ರಾ.ಪಂ. 10,605, ಆರ್ಯಾಪು ಗ್ರಾ.ಪಂ. 10,408, ಕೋಡಿಂಬಾಡಿ 10,404, ಕೆದಂಬಾಡಿ ಗ್ರಾ.ಪಂ. 9,167 ರಂತೆ ಹೆಚ್ಚಿನ ಮಾನವ ದಿನಗಳನ್ನು ಬಳಕೆ ಮಾಡಿ ಸಾಧನೆ ತೋರಿದೆ.

100 ಮಾನವ ದಿನಗಳ ಬಳಕೆ

Advertisement

ತಾಲೂಕಿನಲ್ಲಿ ಮಹಿಳೆಯರ ಭಾಗ ವಹಿಸುವಿಕೆ ಪ್ರಮಾಣ ಶೇ. 48ರಷ್ಟಿದ್ದು, 1,00,820 ಮಾನವ ದಿನಗಳನ್ನು ಮಹಿಳೆಯರು, 40,764 ಮಾನವ ದಿನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಫಲಾನುಭವಿಗಳು ವಿನಿಯೋಗಿಸಿದ್ದಾರೆ. 102 ಕುಟುಂಬಗಳು 100 ಮಾನವ ದಿನ ಗಳನ್ನು ಪೂರೈಸಿವೆ.  ತಾಲೂಕಿನಲ್ಲಿ ಒಟ್ಟಾರೆ ಯಾಗಿ 8.03 ಕೋ.ರೂ. ಅನುದಾನವನ್ನು ಬಳಸಿಕೊಂಡಿದ್ದು 6.14 ಕೋ.ರೂ. ಕೂಲಿ ಮೊತ್ತ ವನ್ನು ಹಾಗೂ 1.89 ಕೋ.ರೂ. ಸಾಮಗ್ರಿ ಮೊತ್ತವನ್ನು ವಿನಿಯೋಗಿಸಲಾಗಿದೆ. ಹಿಂದಿನ ವರ್ಷದ ಒಟ್ಟಾರೆ ಅನುದಾನಕ್ಕಿಂತ 1.07 ಕೋ.ರೂ. ಹೆಚ್ಚು ಅನುದಾನವನ್ನು ಈ ಬಾರಿ ಬಳಸಿಕೊಳ್ಳಲಾಗಿದೆ.

ವೈಯಕ್ತಿಕ ಕಾಮಗಾರಿಗೆ ಹೆಚ್ಚಿದ ಬೇಡಿಕೆ

ಗ್ರಾಮ ಪಂಚಾಯತ್‌ ಗಳಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಹೆಚ್ಚಿದ್ದು ತೋಟಗಾರಿಕೆ, ಹೈನುಗಾರಿಕೆ, ಅಂತರ್ಜಲ ಚೇತನ ವಿಷಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈತ್ತಿಕೊಳ್ಳಲಾಗುತ್ತಿದೆ. ಅಡಿಕೆ, ತೆಂಗು, ಕಾಣುಮೆಣಸು, ಕೊಕ್ಕೊ, ಗೇರು, ವೀಳ್ಯದೆಲೆ, ಮಲ್ಲಿಗೆ ಹೀಗೆ ಸುಮಾರು 1487 ತೋಟಗಾರಿಕೆ ಕಾಮಗಾರಿ ಅನುಷ್ಠಾನಿಸಲಾಗಿದೆ. 76 ಬಸಿ ಕಾಲುವೆ ನಿರ್ಮಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ 117 ಬಾವಿ, 31 ಆಡಿನ ಶೆಡ್‌, 207 ದನದ ಹಟ್ಟಿ, 9 ಹಂದಿ ಸಾಕಾಣೆ ಶೆಡ್‌, 45 ಕೋಳಿ ಶೆಡ್‌, 362 ಸೋಕ್‌ ಪಿಟ್‌, 8 ಬೋರ್‌ ವೆಲ್‌ ರಿಚಾರ್ಜ್‌, 7 ಕೃಷಿ ಹೊಂಡ, 38 ಶೌಚಾಲಯ, 79 ಎರೆಹುಳು ಗೊಬ್ಬರ ಘಟಕ, 41 ಮಳೆ ನೀರು ಇಂಗು ಗುಂಡಿ, 4 ಗೋಬರ್‌ ಗ್ಯಾಸ್‌ ಗುಂಡಿ, 2 ಮೀನುಗಾರಿಕೆ ಹೊಂಡ, 13 ಗೊಬ್ಬರ ಗುಂಡಿ ನಿರ್ಮಾಣ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.

ನರೇಗಾದಿಂದ ಅನುಕೂಲ

ಉದ್ಯೋಗ ಖಾತರಿ ಯೋಜನೆಯಡಿ ಅರ್ಹ ವೈಯಕ್ತಿಕ ಫಲಾನುಭವಿಗಳಿಗೆ 2.5 ಲ.ರೂ. ವರೆಗೆ ಆರ್ಥಿಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಈ ಬಾರಿ 309 ರೂ.ಕೂಲಿ ದರ ನಿಗದಿ ಮಾಡಲಾಗಿದೆ. ತಾಲೂಕಿನ 22 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವೈಯಕ್ತಿಕವಾಗಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಹಾಗೂ ಎರೆಹುಳು ಗೊಬ್ಬರ ಘಟಕ ಸೇರಿದಂತೆ ಹೈನುಗಾರಿಕೆ ಸಂಬಂಧಿತ ಕಾಮಗಾರಿ ಅನುಷ್ಠಾನ ಮಾಡಲಾಗಿದೆ. -ನವೀನ್‌ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ.

ಪುತ್ತೂರು ನಿರಂತರ ಪ್ರಗತಿ ಎರಡು ವರ್ಷಗಳಿಂದ ತಾಲೂಕಿನಲ್ಲಿ ನರೇಗಾ ಯೋಜನೆ ಸಮರ್ಪಕವಾಗಿ ಬಳಸಿಕೊಂಡು ಗುರಿ ಮೀರಿದ ಸಾಧನೆ ಮಾಡಲಾಗಿದೆ. 2022-23 ನೇ ಸಾಲಿನಲ್ಲಿ ಕೂಡಾ ನರೇಗಾ ಯೋಜನೆಯು ಪುತ್ತೂರು ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಲು ಎಲ್ಲರ ಸಹಕಾರ, ಸಹಭಾಗಿತ್ವ ನಿರೀಕ್ಷಿಸಲಾಗಿದೆ. -ಶೈಲಜಾ ಭಟ್‌, ಸಹಾಯಕ ನಿರ್ದೇಶಕರು (ಗ್ರಾ.ಉ.)

Advertisement

Udayavani is now on Telegram. Click here to join our channel and stay updated with the latest news.

Next