Advertisement

ಪುತ್ತೂರು: ರಾಜ್ಯ ಮಟ್ಟದ ಯುವಜನ ಮೇಳ

09:34 AM Feb 04, 2018 | |

ಪುತ್ತೂರು: ಆಧುನಿಕ ಜಗತ್ತಿನ ಒತ್ತಡಗಳ ನಡುವೆಯೂ ಬದುಕನ್ನು ಸುಂದರವಾಗಿಟ್ಟುಕೊಳ್ಳಲು ಸಾಧ್ಯ. ಸದಾ ಕ್ರಿಯಾಶೀಲ ಚಟುವಟಿಕೆಯಿಂದ ಬದುಕು ಸುಂದರ ಆಗಿರುತ್ತದೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುತ್ತೂರು ತಾ.ಪಂ., ನಗರಸಭೆ, ಜಿಲ್ಲಾ, ರಾಜ್ಯ, ಜಿಲ್ಲಾ ಯುವಜನ ಒಕ್ಕೂಟ, ನೆಹರೂ ನಗರ ಸುದಾನ ವಸತಿ ಶಾಲೆಯ ಆಶ್ರಯದಲ್ಲಿ ನೆಹರೂ ನಗರ ಸುದಾನ ವಸತಿಯುತ ಶಾಲೆ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಶುಕ್ರವಾರ ರಾತ್ರಿ ಆಗಮಿಸಿ ಅವರು ಮಾತನಾಡಿದರು.

ಯುವಜನತೆಯ ಪ್ರತಿಭೆ ಹೊರತರುವ ಈ ವೇದಿಕೆ ಉತ್ತಮ ಸಮಾಜ ನಿರ್ಮಿಸಲು ಕಾರಣವಾಗಲಿದೆ. ವಿದ್ಯಾರ್ಥಿ ಮತ್ತು ಯುವಜನತೆಯಿಂದ ದೇಶದ  ಸಾಮಾಜಿಕ, ರಾಜಕೀಯ, ಆರ್ಥಿಕ ಬದಲಾವಣೆ ಸಾಧ್ಯ ಎಂದರು.

ಸಮ್ಮಾನ: ಸುದಾನ ವಸತಿಯುತ ಶಿಕ್ಷಣ ಸಂಸ್ಥೆಯ ಮುಖ್ಯಗುರು ಶೋಭಾ ನಾಗರಾಜ್‌ ಅವರನ್ನು ಸಂಘಟಕರು ಸಮ್ಮಾನ ಮಾಡಿದರು. ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಸಹಾಯಕ ಆಯುಕ್ತ ಕೃಷ್ಣಮೂರ್ತಿ ಎಚ್‌.ಕೆ., ಜಿ.ಪಂ. ಸದಸ್ಯ ಎಂ.ಎಸ್‌ ಮಹಮ್ಮದ್‌, ಚಲನಚಿತ್ರ ನಟ ಸುರೇಶ್‌ ರೈ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ವೇದಿಕೆಯಲ್ಲಿದ್ದರು.

ಯುವ ಸಬಲೀಕರಣ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿ, ರಾಕೇಶ್‌ ರೈ ಕೆಡೆಂಜಿ ವಂದಿಸಿದರು.

Advertisement

ಅಭಿನಂದನಾ ಸಮಾರಂಭ
ಸ್ಪರ್ಧಾ ಕಾರ್ಯಕ್ರಮಗಳ ನಡುವೆ ವಿವೇಕ ವೇದಿಕೆಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಸುದಾನ ವಸತಿಯುತ ಶಿಕ್ಷಣ ಸಂಸ್ಥೆಯ ಸಿಬಂದಿ ಬಾಲು ನಾಯ್ಕ, ಬೆಳ್ತಂಗಡಿಯ ಯಂಗ್‌ ಚಾಲೆಂಜರ್ ಮುಂಡಾಜೆಯ ನಾಮದೇವ್‌, ಜಿಲ್ಲಾ ಒಕ್ಕೂಟದ ಅಧ್ಯಕ್ಷರಾಗಿ ಹೆಚ್ಚು ಸಹಕಾರ ನೀಡಿದ ನರೇಶ್‌ ಸಸಿಹಿತ್ಲು, ರಾಜ್ಯ ಮಟ್ಟದ ಪ್ರತಿಭೆ ಗುರುಪ್ರಿಯ ನಾಯಕ್‌, ಸುಳ್ಯ ತಾಲೂಕಿನ ತೇಜಸ್‌ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕಿ ಶಕುಂತಳಾ ಶೆಟ್ಟಿ, ನಿವೃತ್ತ ಮುಖ್ಯಗುರು ಅಬ್ರಹಾಂ ವರ್ಗೀಸ್‌, ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ವಂ| ವಿಜಯ ಹಾರ್ವಿನ್‌, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ ಅಭಿನಂದಿಸಿದರು.

ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಸದಸ್ಯೆ ದಿವ್ಯಾ ಪುರುಷೋತ್ತಮ ಮುಂಗ್ಲಿ ಮನೆ, ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡು, ಯುವಸಬಲೀಕರಣ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಮೆರವಣಿಗೆ ನೇತೃತ್ವ ವಹಿಸಿಕೊಂಡಿದ್ದ ಅರುಣ್‌ ಕುಮಾರ್‌ ಪುತ್ತಿಲ, ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಯುವ ಸಬಲೀಕರಣದ ನವೀನ್‌, ಕ್ಷೇತ್ರ ಶಿಕ್ಷಣಾಧಿ ಕಾರಿ ಸುಕನ್ಯಾ ಡಿ.ಎನ್‌., ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.ಕ್ರೀಡಾಧಿ ಕಾರಿ ಮಾಮಚ್ಚನ್‌ ಸ್ವಾಗತಿಸಿ, ಯುವಜನ ಒಕ್ಕೂಟದ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು ವಂದಿಸಿದರು. ರಾಕೇಶ್‌ ರೈ ಕೆಡೆಂಜಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next