ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಫಾರ್ಮ್ ನೋಡಿಕೊಳುತಿದ್ದ ರೈಟರ್ ಅತ್ಯಾಚಾರಗೈದು ವಿಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಘಟನೆ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅರಿಯಡ್ಕ ಗ್ರಾಮದ ಮಡ್ಯಂಗಳ ಸೆರೆನ್ ಕೋಳಿ ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಟರ್, ಉಮ್ಮರ್ ವಿರುದ್ಧ ದೂರು ನೀಡಲಾಗಿದೆ. ಅತ್ಯಾಚಾರ ನಡೆಸಿದ ಬಳಿಕ ವಿಡಿಯೋ ಚಿತ್ರಿಕರಿಸಿ ಆರೋಪಿಯು ಮಹಿಳೆಯ ಪತಿಗೆ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಕುಣಿಗಲ್: ನಿಂತಿದ್ದ ಟ್ಯಾಂಕರ್ ಗೆ ಬೈಕ್ ಢಿಕ್ಕಿಯಾಗಿ ಮೈಸೂರಿನ ಯುವಕ ಸಾವು
ಸಂತ್ರಸ್ತ ಮಹಿಳೆಯು ಪತಿ ಹಾಗೂ ಮಗುವಿನೊಂದಿಗೆ ಅರಿಯಡ್ಕದ ಮಡ್ಯಂಗಳದಲ್ಲಿ ವಾಸಿಸುತ್ತಿದ್ದಾರೆ. ಕೃತ್ಯವು ಮೇ 5 ರಂದು ನಡೆದಿದ್ದು ಜೀವ ಬೆದರಿಕೆ ಇದ್ದ ಕಾರಣ ಜೂ.14 ರಂದು ದೂರು ನೀಡಿದ್ದೇನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.