Advertisement

ಪುತ್ತೂರು : ರಸ್ತೆಯಲ್ಲಿ ಬಿದ್ದು ಹೈಡ್ರಾಮಾ ಸೃಷ್ಟಿಸಿದ ಯುವಕ!

11:27 PM Jun 08, 2022 | Team Udayavani |

ಪುತ್ತೂರು : ಗದಗ ಮೂಲದ ವ್ಯಕ್ತಿಯೋರ್ವ ರಸ್ತೆಯಲ್ಲಿ ಬಿದ್ದು ಹೈ ಡ್ರಾಮಾ ಸೃಷ್ಟಿಸಿದ ಘಟನೆ ಪುತ್ತೂರಿನ ಕೊಂಬೆಟ್ಟು ರಸ್ತೆಯಲ್ಲಿ ನಡೆದಿದೆ.

Advertisement

ಗದಗ ಮೂಲದ ವ್ಯಕ್ತಿ ಕಂಠಪೂರ್ತಿ ಕುಡಿದು ಕೈಗೆ, ಹೊಟ್ಟೆಗೆಲ್ಲ ಬ್ಯಾಂಡೇಜ್‌ ಸುತ್ತಿ ಕೊಂಡು ಪ್ರಜ್ಞೆ ಇಲ್ಲದ ರೀತಿ ರಸ್ತೆಯಲ್ಲಿ ಬಿದ್ದು ಹೈ ಡ್ರಾಮಾ ಸೃಷ್ಟಿಸಿದ್ದಾನೆ. ಈತನ ಪರಿಸ್ಥಿತಿ ಕಂಡು ಕಂಗಾಲಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಾಯದಿಂದ ಆತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರಿಶೀಲಿಸಿ ದಾಗ ಯಾವುದೇ ಗಾಯ ಕಾಣಿಸಿಲ್ಲ. ಬಿಳಿ ಬಣ್ಣದ ಬಟ್ಟೆಗೆ ಬಣ್ಣವನ್ನು ಸುರಿದು ಬ್ಯಾಂಡೇಜ್‌ ತರಹ ಸುತ್ತಿಕೊಂಡಿದ್ದು ಬೆಳಕಿಗೆ ಬಂತು.

 

Advertisement

Udayavani is now on Telegram. Click here to join our channel and stay updated with the latest news.

Next