Advertisement

ತಿಂಗಳಿನಿಂದ ಕೈಕೊಟ್ಟಿದೆ ಮಿನಿ ವಿಧಾನಸೌಧದ ಲಿಫ್ಟ್‌

12:26 AM Aug 31, 2019 | Team Udayavani |

ನಗರ: ಪುತ್ತೂರು ಮಿನಿ ವಿಧಾನಸೌಧ ಕಟ್ಟಡದಲ್ಲಿ ಸಾರ್ವಜನಿಕ ಉಪಯೋಗಿಯಾಗಿ ಬಳಕೆ ಯಾಗುತ್ತಿದ್ದ ಲಿಫ್ಟ್‌ ವ್ಯವಸ್ಥೆ ಕೈಕೊಟ್ಟಿದ್ದು, ಮುಖ್ಯವಾಗಿ ಸರಕಾರಿ ಕಚೇರಿಗಳಿಗೆ ತೆರಳುವ ವೃದ್ಧರು, ಅಂಗವಿಕಲರು, ಅವಲಂಬಿತರಿಗೆ ತೊಂದರೆಯಾಗಿ ಪರಿಣಮಿಸಿದೆ.

Advertisement

ಒಂದು ತಿಂಗಳಿನಿಂದ ಈ ಲಿಫ್ಟ್‌ ಕೆಟ್ಟು ನಿಂತಿದ್ದು, ಇದರ ದುರಸ್ತಿ ಕಾರ್ಯ ನಡೆಯದೇ ಇರುವುದರಿಂದ ಮೇಲಿನ ಮಹಡಿ ಗಳಲ್ಲಿರುವ ಕಚೇರಿಗಳ ಅಗತ್ಯ ತೆಗಳಿ ಗಾಗಿ ತೆರಳುವವರಿಗೆ ತೊಂದರೆ ಯಾಗಿದೆ. ಮೇಲಿನ ಮಹಡಿ ಗಳಲ್ಲಿ ಉಪ ವಿಭಾಗಾಧಿಕಾರಿ ಕಚೇರಿ, ಉಪ ನೋಂದಣ ಕಚೇರಿ, ಸರ್ವೆ ಇಲಾಖೆ, ಶಾಸಕರ ಕಚೇರಿಗಳಿಗೆ ಹೋಗುವ ಅಸಹಾಯಕರು ಪರದಾಟ ನಡೆಸಬೇಕಾಗಿದೆ.

ತಿಂಗಳ ಹಿಂದೆ ಸಿಡಿಲಿನ ಲಿಫ್ಟ್‌ ವ್ಯವಸ್ಥೆಗೆ ಹಾನಿಯಾಗಿದ್ದು, ಖಾಸಗಿ ನಿರ್ವಹಣ ಸಂಸ್ಥೆಯವರು ದುರಸ್ತಿಗೆ ವಿಳಂಬ ಮಾಡಿದ್ದಾರೆ ಎನ್ನುತ್ತಾರೆ ಅಧಿಕಾರಿ ಗಳು. ಈ ದಿನಗಳಲ್ಲಿ ನೋಂದಣಿ ಇಲಾಖಾ ಕಚೇರಿಗೆ ವೃದ್ಧರನ್ನು ಮತ್ತು ಅಂಗವಿ ಕಲರನ್ನು ಮೆಟ್ಟಲಿನ ಮೂಲಕ ಎತ್ತಿ ಕೊಂಡು ಹೋಗಬೇಕಾಗಿದೆ. ಕಂದಾಯ ಇಲಾಖೆಯ ಕಚೇರಿಗಳೂ ಇದೇ ಕಟ್ಟಡ ದಲ್ಲಿದ್ದು, ಅಸಹಾಯಕರನ್ನು ಎತ್ತಿಕೊಂಡು ತ್ರಾಸದಾಯಕವಾಗಿದೆ.

ಲಿಫ್ಟ್‌ ಮೂಲಕ ಹೋಗಲು ವೃದ್ದರು ಮತ್ತು ಅಂಗವಿಕಲರಿಗಾಗಿ ಇರುವ ವೀಲ್‌ಚಯರ್‌ ತಳ ಹಂತದ ಲಿಫ್ಟ್ನ ಬಳಿಯೇ ಬಾಕಿಯಾಗಿದೆ. ದಿನವಿಡೀ ಜನರಿಂದ ತುಂಬಿರುವ ಮಿನಿ ವಿಧಾನಸೌಧದ ಮೆಟ್ಟಿಲಿನಲ್ಲಿ ವೃದ್ಧರು ಹಾಗೂ ಅಂಗವಿಕಲರು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

 ದುರಸ್ತಿ ನಡೆಯಲಿದೆ
ಲಿಫ್ಟ್‌ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆ ಹೊಂದಿದೆ. ದುರಸ್ತಿಗೆ ದೊಡ್ಡ ಮೊತ್ತವೂ ತಗುಲುತ್ತಿರುವುದರಿಂದ ನಿಯಮದಂತೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ತಡವಾಗಿದೆ. ಜತೆಗೆ ಲಿಫ್ಟ್‌ನ ಬಿಡಿ ಭಾಗಗಳನ್ನು ಬೆಂಗಳೂರಿ ನಿಂದಲೇ ತರಿಸುವ ಅನಿವಾರ್ಯತೆ ಇದೆ. ವೃದ್ಧರಿಗೆ ಮತ್ತು ಅಂಕವಿಕಲರಿಗೆ ತೊಂದರೆಯಾಗುತ್ತಿರುವುದಕ್ಕೆ ನಾವೂ ವಿಷಾದಿಸುತ್ತೇವೆ. ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ.
– ಎಚ್‌.ಕೆ. ಕೃಷ್ಣಮೂರ್ತಿ,
ಸಹಾಯಕ ಕಮಿಷನರ್‌, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next