Advertisement

ಪುತ್ತೂರು ದೇಗುಲ: ಲಕ್ಷದೀಪೋತ್ಸವ

07:55 PM Dec 04, 2021 | Team Udayavani |

ಪುತ್ತೂರು: ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ಶುಕ್ರವಾರ ರಾತ್ರಿ ನಡೆಯಿತು.

Advertisement

ದೇಗುಲದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹಾಗೂ ಕುಂಟಾರು ಶ್ರೀಧರ್‌ ತಂತ್ರಿ ನೇತೃತ್ವದಲ್ಲಿ ದೇಗುಲದ ಪ್ರಧಾನ ಅರ್ಚಕ ವಿ.ಎಸ್‌.ಭಟ್‌ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸಂಜೆ ದೇವರ ವಿಶೇಷ ಉತ್ಸವ, ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿಯಲ್ಲಿ ಭಕ್ತರು ಹಣತೆ ಬೆಳಗಿಸಿ ದೀಪೋತ್ಸವದಲ್ಲಿ ಸಂಭ್ರಮಿಸಿದರು.

ದೇವಸ್ಥಾನದ ದ್ವಾರ ಪ್ರಾಕಾರಗುಡಿಗಳಲ್ಲಿ ಮಾವಿನ ತಳಿರುತೋರಣ, ದೇವಸ್ಥಾನದ ಸುತ್ತು, ರಾಜಗೋಪುರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಲಕ್ಷ ದೀಪೋತ್ಸವ ಪ್ರಯುಕ್ತ ನೂರಾರು ಮಂದಿ ಸ್ವತ್ಛತೆ ಸೇನಾನಿಗಳು, ನಿತ್ಯ ಕರಸೇವಕ ಗೌರವಾಧ್ಯಕ್ಷ ವೇಣಗೋಪಾಲ್‌ ನೇತೃ ತ್ವದಲ್ಲಿ ನಿತ್ಯ ಕರಸೇವಕರು ಸ್ವತ್ಛತೆ ಯಲ್ಲಿ ಕೈ ಜೋಡಿಸಿದರು. ದೇಗುಲದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ರೋಹಿಣಿ ಆಚಾರ್ಯ ಅವರ ನೇತೃತ್ವದಲ್ಲಿ ಶೋಭಾ, ಸುಪ್ರಿಯಾ, ಪವಿತ್ರಾ, ಯಮುನಾ, ಪುಷ್ಪಾ, ಸಹನಾ ಮತ್ತು ಬಳಗದವರಿಂದ ರಥಬೀದಿಯಲ್ಲಿ ರಂಗೋಲಿ ಸೇವೆ, ಒಳಾಂಗಣದ ಗೋಪುರದಲ್ಲಿ ಮಹಾ ಲಿಂಗೇಶ್ವರ ಭಜನ ಮಂಡಳಿಯಿಂದ ಭಜನೆ ಸೇವೆ ನಡೆಯಿತು.

ದೀಪೋತ್ಸವಕ್ಕೆ ಚಾಲನೆ:

ಬ್ರಹ್ಮಶ್ರೀ ಶ್ರೀಧರ್‌ ತಂತ್ರಿ ರಥ ಬೀದಿ ಯಲ್ಲಿರುವ ಹಣತೆಗೆ ದೀಪ ಪ್ರಜ್ವಲಿಸಿದರು. ಬಳಿಕ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್‌ ನಾರಾವಿ, ರಾಮಚಂದ್ರ ಕಾಮತ್‌, ರಾಮ್‌ದಾಸ್‌ ಗೌಡ, ದೇಗುಲದ ಕಚೇರಿ ವ್ಯವಸ್ಥಾಪಕ ಹರೀಶ್‌ ಶೆಟ್ಟಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ದೇಗುಲದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಮಾಜಿ ಆಡಳಿತ ಮೊಕ್ತೇಸರ ಎನ್‌.ಕೆ.ಜಗನ್ನಿವಾಸ ರಾವ್‌ ಪಾಲ್ಗೊಂಡರು.

Advertisement

ಬಲಿ ಉತ್ಸವ ತೆಪ್ಪೋತ್ಸವ:

ಮಹಾಪೂಜೆಯ ಬಳಿಕ ಬಲಿ ಹೊರಟು ರುದ್ರವಾದ್ಯಗಳಾದ ತಿಮಲೆ (ಶಿವಲಿ) ಚೆಂಡೆ, ಡೋಲು ಘಂಟೆಯ ತಾಂತ್ರಿಕವಾದನದೊಂದಿಗೆ ತಂತ್ರಸುತ್ತು, ಸರ್ವವಾದ್ಯ ಸುತ್ತಿನಲ್ಲಿ ರಾಜಾಂಗಣದಲ್ಲಿ ಉಡಕೆ, ಚೆಂಡೆ, ಭಜನೆ, ವಾದ್ಯ ಸುತ್ತು ನೆರವೇರಿತು. ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ ತೆಪ್ಪೋತ್ಸವ ನಡೆಯಿತು. ತೆಪ್ಪೋತ್ಸವದ ವೇಳೆ ಕೆರೆಯ ಸುತ್ತಲೂ ಹಣತೆ ಬೆಳಗಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next