Advertisement

ಪುತ್ತೂರು: ಸಿನಿಮೀಯ ರೀತಿಯಲ್ಲಿ ಅಂತರರಾಜ್ಯ ದಂತಚೋರರ ಬಂಧನ

02:55 PM Jun 19, 2022 | Team Udayavani |

ಪುತ್ತೂರು: ಮಿಂಚಿನ ಕಾರ್ಯಾಚರಣೆ ಮಾಡಿ ಸಿನಿಮೀಯ ರೀತಿಯಲ್ಲಿ 6 ಮಂದಿ ಅಂತರರಾಜ್ಯ ದಂತಚೋರರನ್ನು ಬಂಧಿಸಿ ಎರಡು ದಂತ ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಪುತ್ತೂರು ಉಪವಿಭಾಗೀಯ ವಲಯದಲ್ಲಿ ಭಾನುವಾರ ನಡೆಸಿದೆ.

Advertisement

ತಮಿಳುನಾಡು ಮತ್ತು ಕೇರಳ ಮೂಲದ ಶಶಿಕುಮಾರ್, ಸತೀಶ್, ವಿಜ್ಞೇಶ್, ವಿನಿತ್, ಸಂಪತ್‌ಕುಮಾರ, ರತೀಶ ಬಂಧಿತ ಆರೋಪಿಗಳು.

ಮಾಣಿ-ಮೈಸೂರು ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್‌ನಲ್ಲಿ ವಾಹನವನ್ನು ಅಡ್ಡಗಟ್ಟಿ ಎರಡು ದಂತ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಅಂಕೋಲಾ: ಲಾರಿ ಮತ್ತು ಓಮಿನಿ ನಡುವೆ ಅಪಘಾತ; ಪ್ರತಿಷ್ಠಿತ ಹೊಟೇಲ್ ಮಾಲಕರ ಪತ್ನಿ ಸಾವು

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಪಿ ಕಾರ್ಯಪ್ಪ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಕಿರಣ್ ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ ಎಸ್‌ಎನ್‌, ಶಿವಾನಂದ್ ಆಚಾರ್ಯ, ಪ್ರಕಾಶ್‌ ಬಿ ಟಿ, ಕುಮಾರಸ್ವಾಮಿ, ಮೆಹಬೂಬ್, ಪ್ರಸಾದ್, ಅರಣ್ಯ ರಕ್ಷಕರುಗಳಾದ ನಿಂಗರಾಜ್, ಸುಧೀರ್, ಸತ್ಯನ್‌, ದೀಪಕ, ಉಮೇಶ,ಇಲಾಖೆ ವಾಹನ ಚಾಲಕರಾದ ಜಗದೀಶ್, ರೋಹಿತ್ ಪಾಲ್ಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next