Advertisement

ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ

02:04 PM Dec 02, 2018 | |

ಪುತ್ತೂರು: ನಗರಸಭಾ ವ್ಯಾಪ್ತಿಯ ಕಬಕ 1ನೇ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಸ್ವಚ್ಛತೆಗಾಗಿ ಕಸ ಸಂಗ್ರಹದ ಬಕೆಟ್‌ ವಿತರಣೆ ಶನಿವಾರ ನಡೆಯಿತು. ವಾರ್ಡ್‌ನ ರಕ್ತೇಶ್ವರಿ ವಠಾರ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ನಗರಸಭೆಯ 5 ಲಕ್ಷ ರೂ. ಅನುದಾನದಲ್ಲಿ 72 ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮತ್ತು 3.50 ಲಕ್ಷ ರೂ. ವೆಚ್ಚದಲ್ಲಿ 65 ಮೀ. ಚರಂಡಿ ನಿರ್ಮಾಣದ ಕಾಮಗಾರಿಗೆ ತೆಂಗಿನಕಾಯಿ ಒಡೆಯುವ ಮೂಲಕ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.

Advertisement

ಆದ್ಯತೆಯಲ್ಲಿ ಕೆಲಸ
ಪರಿಸರದ 150 ಮಂದಿಗೆ ಕಸ ಸಂಗ್ರಹದ ಬಕೆಟ್‌ ವಿತರಿಸಿದ ಸಂಜೀವ ಮಠಂದೂರು ಮಾತನಾಡಿ, ಸಾರ್ವಜನಿಕ ಆವಶ್ಯಕತೆಗಳ ಕಾಮಗಾರಿಯ ಸಂದರ್ಭ ಸಾರ್ವಜನಿಕರ ಸಹಕಾರವೂ ಅಗತ್ಯ. ಪ್ರತಿ ಮನೆ ಹಾಗೂ ಮನಗಳಲ್ಲಿ ಸ್ವಚ್ಛತೆಯ ಅರಿವು ಮೂಡಬೇಕು. ಕಸ, ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿಯವರಿಗೆ ನೀಡಬೇಕು. ಎಲ್ಲರೂ ಜಾಗೃತರಾದರೆ ಸ್ವಚ್ಛ  ಭಾರತದ ಪರಿಕಲ್ಪನೆ ಈಡೇರಲು ಸಾಧ್ಯ. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಬಕೆಟ್‌ಗಳನ್ನು ನೀಡಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸಹಕಾರ ನೀಡಿ
ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ವಾರ್ಡ್‌ಗಳಲ್ಲಿ ಸಮಸ್ಯೆಗಳನ್ನು ಗುರುತಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಸ್ವತ್ಛತೆಯ ಕುರಿತು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ, ತಾಜ್ಯವನ್ನು ಬಿಸಾಡದೆ ಸ್ವತ್ಛತೆಗಾಗಿ ನಗರಸಭೆಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.  ನಗರಸಭೆ ಸದಸ್ಯರಾದ ಕೆ. ಜೀವಂಧರ್‌ ಜೈನ್‌, ಯಶೋದಾ ಹರೀಶ್‌, ಸಂತೋಷ್‌ ಕುಮಾರ್‌ ಬೊಳುವಾರು, ನಗರಸಭಾ ಎಂಜಿನಿಯರ್‌ ದಿವಾಕರ, ಸ್ಥಳೀಯ ಪ್ರಮುಖರಾದ ರಾಮಕೃಷ್ಣ ಗೌಡ, ನವೀನ್‌ ಕುಮಾರ್‌ ಶೆಟ್ಟಿ, ಜಯವೀರ್‌ ಮಯ್ಯ, ಶಂಕರ್‌, ಅವಿನಾಶ್‌, ಸರಿತಾ, ವೀಣಾ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಶಿವರಾಮ ಸಪಲ್ಯ ಸ್ವಾಗತಿಸಿ, ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ವಿನೋದ್‌ ಪಿ. ಕಲ್ಲೇಗ ನಿರೂಪಿಸಿದರು.

ಅಂಗನವಾಡಿ ಕಟ್ಟಡಕ್ಕೆ ಮನವಿ 
27 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ರಕ್ತೇಶ್ವರಿ ವಠಾರದ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡವನ್ನು ಮಂಜೂರುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಂಗನವಾಡಿ ಕಾರ್ಯಕರ್ತೆ ರಮಾ ಅವರು ಶಾಸಕರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next