Advertisement
ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಮಸೂದ್ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತೆಗೆಯಬೇಕಾದರೆ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು, ಆಸ್ಪತ್ರೆಯ ಬಿಲ್ಲನ್ನು ಸರಕಾರವೇ ಪಾವತಿಸಬೇಕು, ಸ್ವತಃ ಜಿಲ್ಲಾಧಿಕಾರಿಗಳೇ ಆಸ್ಪತ್ರೆಗೆ ಬಂದು ಭರವಸೆ ನೀಡಬೇಕು ಎಂದು ಮುಸ್ಲಿಂ ಒಕ್ಕೂಟದ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಸೂದ್ ಗೆ ಚಿಕಿತ್ಸೆ ನೀಡಿದ ಬಾಬ್ತು 43 ಸಾವಿರ ಬಿಲ್ ಆಗಿದ್ದು, ಅದರಲ್ಲಿ 13 ಸಾವಿರ ರೂ. ಗಳನ್ನು ಸುಳ್ಯದ ಮುಖಂಡರು ಮಾತನಾಡಿದ ಮೇರೆಗೆ ಕಡಿಮೆ ಮಾಡಲಾಗಿತ್ತೆನ್ನಲಾಗಿದೆ. ಉಳಿದ 30 ಸಾವಿರ ರೂ.ಗಳನ್ನು ಜಿಲ್ಲಾಡಳಿತವೇ ಪಾವತಿಸಬೇಕೆಂಬ ಮುಖಂಡರ ಆಗ್ರಹವನ್ನೂ ಜಿಲ್ಲಾಡಳಿತ ಒಪ್ಪಿಕೊಂಡಿತೆನ್ನಲಾಗಿದೆ.
ತಮ್ಮ ಬೇಡಿಕೆಗಳಿಗೆ ಜಿಲ್ಲಾಡಳಿತ ಹಿನ್ನಲೆಯಲ್ಲಿ ಮಸೂದ್ ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲು ಅವರ ಕುಟುಂಬಿಕರು ಮತ್ತು ಸಮಾಜ ಬಾಂಧವರು ಒಪ್ಪಿದರು. ಅದರಂತೆ ಇದೀಗ ಮೃತದೇಹದ ಮರಣೋತ್ತರ ಶವ ಪರೀಕ್ಷೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
Related Articles
Advertisement
ಈ ಮಾತುಕತೆಯಲ್ಲಿ ಮಂಗಳೂರು ಶಾಸಕ ಯು.ಟಿ. ಖಾದರ್, ಸುಳ್ಯದ ಮುಸ್ಲಿಂ ಮುಖಂಡರುಗಳಾದ ಕೆ.ಎಂ.ಮುಸ್ತಫಾ, ಇಕ್ಬಾಲ್ ಬೆಳ್ಳಾರೆ, ಜಾಬಿರ್ ಅರಿಯಡ್ಕ, ಸುಹೈಲ್ ಕಂದಕ್, ಶಾಹುಲ್ ಹಮೀದ್, ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ ಮೊದಲಾದ ಹಲವು ಮಂದಿ ಇದ್ದರೆಂದು ತಿಳಿದುಬಂದಿದೆ.
ಬೆಳ್ಳಾರೆಯಲ್ಲಿ ಅಂತ್ಯಸಂಸ್ಕಾರಮಸೂದೆ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಸಂಸ್ಕಾರಕ್ಕಾಗಿ ದೇಹವನ್ನು ಬೆಳ್ಳಾರೆಗೆ ತರಲು ನಿರ್ಧರಿಸಲಾಗಿದೆ. ಬೆಳ್ಳಾರೆ ಮಸೀದಿ ಖಬರ್ ಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.