ಪುತ್ತೂರು: ತನ್ನ ಖಾಸಗಿ ವಿಚಾರದ ಆಡಿಯೋವನ್ನು ವೈರಲ್ ಮಾಡಿ ಮಾನ ಹಾನಿ ಮಾಡಿರುವುದಾಗಿ ಪಟ್ನೂರು ಗ್ರಾಮದ ಸುದರ್ಶನ್ ಗೌಡ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ, ಪಟ್ನೂರು ಗ್ರಾಮದ ರಾಮನಗರ ಲೇ ಔಟ್‌ನ ಸುದರ್ಶನ್ ಗೌಡ ಅವರು ರಾಜೀನಾಮೆ ನಿರ್ಧಾರದ ಕುರಿತು ಮಾತನಾಡಿದ್ದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವಿಚಾರವಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗೃಹ ರಕ್ಷಕ ಸಿಬಂದಿ ಸಂತೋಷ್ ಎಂಬವರು ಅರ್ಜಿದಾರರ ವಿಚಾರದ ಕುರಿತು ಆಡಿಯೋವನ್ನು ವೈರಲ್ ಮಾಡಿ ಮಾನ ಹಾನಿ ಮಾಡಿದ್ದರು. ಈ ಬಗ್ಗೆ ಪೊಲೀಸರು ದೂರು ಸ್ವೀಕರಿಸಿದ್ದಾರೆ.