Advertisement

ಪುತ್ತೂರು: ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿತ

03:38 PM Jan 17, 2023 | Team Udayavani |

ಪುತ್ತೂರು: ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿದು ಆರೋಪಿ ಪರಾರಿಯಾದ ಘಟನೆ ತಾಲೂಕಿನ ಮುಂಡೂರಿನ ಕಂಪದಲ್ಲಿ ಜ.17 ರಂದು ನಡೆದಿದೆ.

Advertisement

ಚೂರಿ ಇರಿತದಲ್ಲಿ ಮೃತಪಟ್ಟ ಯುವತಿಯನ್ನು ಮುಂಡೂರಿನ ಕಂಪ ನಿವಾಸಿ ಗುರುವ ಅವರ ಪುತ್ರಿ ಜಯಶ್ರೀ (23 ವರ್ಷ) ಎಂದು ಗುರುತಿಸಲಾಗಿದೆ.

ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದು, ಪುತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಸೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next