ಗುರುತಿಸಿಕೊಂಡಿರುವ ಆರ್ವಿ ಇಂಟರ್ ಗ್ರಾಫಿಕ್ಸ್ ಸಂಸ್ಥೆಯಿಂದಮತ್ತೊಂದು ಹೊಸ ಪರಿಕಲ್ಪನೆಯ ಆರ್ವಿ ವೋಕಲ್ ಸ್ಟುಡಿಯೋ ಗುರುವಾರ ಆರಂಭಗೊಂಡಿತು.
Advertisement
ನೂತನ ಆರ್ವಿ ವೋಕಲ್ ಸ್ಟುಡಿಯೋವನ್ನು ಹಿರಿಯ ಛಾಯಾಗ್ರಾಹಕ ಶ್ರೀನಿವಾಸ ಪ್ರಭು ಉದ್ಘಾಟಿಸಿ ಶುಭ ಹಾರೈಸಿದರು. ಸ್ಟುಡಿಯೋದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ರೆಕಾರ್ಡಿಂಗ್ ವ್ಯವಸ್ಥೆಗೆ ಬಿಗ್ ಬಾಸ್ ವಾಯ್ಸ ಬಾಸ್ ಖ್ಯಾತಿಯ ಪ್ರದೀಪ್ ಬಡೆಕ್ಕಿಲ ಅವರು ಮೊದಲ ಧ್ವನಿ ಮುದ್ರಣದ ಮೂಲಕ ಚಾಲನೆ ನೀಡಿ, ಬೆಳೆಯುತ್ತಿರುವ ಪುತ್ತೂರಿನಲ್ಲಿ ತಂತ್ರಜ್ಞಾನ, ಅವಕಾಶ, ವ್ಯವಸ್ಥೆಗಳೂ ಬೆಳೆಯಬೇಕು ಈ ನಿಟ್ಟಿನಲ್ಲಿ ಆರ್ವಿ ಸಂಸ್ಥೆಯು ಪೂರಕ ವ್ಯವಸ್ಥೆಯನ್ನು ಪರಿಚಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಕಲಾವಿದರಾದ ಚಂದ್ರಶೇಖರ ಹೆಗ್ಡೆ ಪುತ್ತೂರು, ಗಣೇಶ್ ಸುಳ್ಯ, ಪವಿತ್ರಾ ರೂಪೇಶ್, ಶಿವಾನಂದ ಶೆಣೈ, ಅಕ್ಷತಾ ಆಚಾರ್ಯ, ರೂಪದರ್ಶಿ ವಿಜೇತಾ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಡಾ| ಗೌರಿ ಪೈ, ಉದ್ಯಮಿ ಬಲರಾಮ ಆಚಾರ್ಯ, ರಾಜೇಶ್ ಬನ್ನೂರು, ವಾಮನ ಪೈ, ಚಿತ್ರನಟ ಅದ್ವೆ„ತ್ ಪುತ್ತೂರು, ಪಾಂಡುರಂಗ ನಾಯಕ್, ರಮೇಶ್ ಕಲ್ಲಡ್ಕ, ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಗಿರೀಶ್, ರಂಗಕರ್ಮಿ ಐ.ಕೆ. ಬೊಳುವಾರು, ಶ್ರೀಧರ ಆಚಾರ್ಯ ಕೊಕ್ಕಡ, ಪಿ.ವಿ. ಗೋಕುಲ್‌ನಾಥ್, ಅಚ್ಯುತ ಪ್ರಭು, ನಹುಷ, ದೀಕ್ಷಿತ್ ಏನಡ್ಕ, ಕೃಷ್ಣಪ್ರಸಾದ್, ರಾಜೇಶ್ ಶರ್ಮ, ರವಿ ನಾರಾಯಣ, ಡಾ| ಚೇತನ್ ಪ್ರಕಾಶ್, ಸಂದೀಪ್, ಲೋಬೋ, ಸುದರ್ಶನ್ ಮುರ, ಗುರುಪ್ರಿಯಾ ನಾಯಕ್, ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೋ, ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಯತೀಶ್, ವಿಘ್ನೇಶ್ ವಿಶ್ವಕರ್ಮ ಆಗಮಿಸಿ ಶುಭ ಕೋರಿದರು. ಆರ್ವಿ ಮೀಡಿಯಾ ವರ್ಕ್ಸ್ ನ ಗಿರೀಶ್ ರಾಜ್ ಎಂ.ವಿ., ಜ್ಞಾನೇಶ್ ವಿಶ್ವಕರ್ಮ ಅತಿಥಿಗಳನ್ನು ಸ್ವಾಗತಿಸಿ, ಸಹಕಾರ ಕೋರಿದರು. ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು. ಸ್ಟುಡಿಯೋ ಸ್ವರ ತಂತ್ರಜ್ಞ ಸೀಮಿತ್ ಆಚಾರ್ಯ ಸಹಕರಿಸಿದರು. ಆಧುನಿಕ ತಂತ್ರಜ್ಞಾನಗಳ ಅಳವಡಿ ಕೆಯ ಜತೆಗೆ ಸ್ವರ ತಂತ್ರಜ್ಞರಿಂದ ನಿರ್ವಹಿಸಲ್ಪಡುವ ಆರ್ವಿ ವೋಕಲ್ ಸ್ಟುಡಿಯೋ ಪುತ್ತೂರಿನಲ್ಲಿ ಹೊಸತನದ ಅವಕಾಶಗಳನ್ನು ತೆರೆದಿಡಲಿದೆ. ಸ್ವರಭಾರವನ್ನು ಅಚ್ಚುಕಟ್ಟಾಗಿ ಮುದ್ರಿಸುವ ತಂತ್ರಜ್ಞಾನ, ಕಿರುಚಿತ್ರ, ಚಲನಚಿತ್ರಗಳಿಗೆ ಡಬ್ಬಿಂಗ್ ವ್ಯವಸ್ಥೆ, ಹಾಡುಗಾರರಿಗಾಗಿ ಟ್ರ್ಯಾಕ್ ಸಿದ್ಧಪಡಿಸುವ ವ್ಯವಸ್ಥೆ, ಕಿರುಚಿತ್ರ, ಚಲನಚಿತ್ರಗಳಿಗೆ ಹೊಸ ರೂಪ ಕೊಡುವ ರೀ-ರೆಕಾರ್ಡಿಂಗ್ ವ್ಯವಸ್ಥೆ, ಶುಭ ಸಮಾರಂಭಗಳಿಗೆ, ಕಾರ್ಯ ಕ್ರಮಗಳಿಗೆ ಅಗತ್ಯವಿರುವ ಪ್ರಚಾರದ ಅನೌನ್ಸ್‌ಮೆಂಟ್‌ಗಳನ್ನು ಸೂಕ್ತ ಹಿನ್ನೆಲೆ ಸಂಗೀತದೊಂದಿಗೆ ಧ್ವನಿ ಮುದ್ರಿಸುವ ವ್ಯವಸ್ಥೆಯನ್ನು ಆರ್ವಿ ವೋಕಲ್ ಸ್ಟುಡಿಯೋ ಹೊಂದಿದೆ.