Advertisement

Puttur: ಅರುಣ್‌ ಕುಮಾರ್‌ ಪುತ್ತಿಲ-ಮಹಿಳೆ ಸಂಭಾಷಣೆ ವೈರಲ್‌

12:25 AM Aug 26, 2024 | Team Udayavani |

ಪುತ್ತೂರು: ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಮಹಿಳೆಯೋರ್ವರ ನಡುವಿನ ರಾಜಕೀಯ ವಿಚಾರಕ್ಕೆ ಸಂಬಂಧಿಸಿರುವ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ತುಣುಕನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದರಲ್ಲಿ ಇರುವ ಕೆಲವು ಅಂಶಗಳು ಚರ್ಚೆಗೆ ಗ್ರಾಸವಾಗಿದೆ.

Advertisement

ಸುಮಾರು 7.46 ನಿಮಿಷದ ಸಂಭಾಷಣೆ ಇದಾಗಿದ್ದು, ಪುತ್ತಿಲ ಅವರ ರಾಜಕೀಯ ನಿಲುವಿನ ಬಗ್ಗೆ ಮಹಿಳೆ ಗಂಭೀರ, ಹಾಸ್ಯಭರಿತ ಧಾಟಿಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಪುತ್ತಿಲ ಎಂದು ಹೇಳಲಾಗಿರುವ ವ್ಯಕ್ತಿ ಜವಾಬು ನೀಡು ತ್ತಿರುವುದು ದಾಖಲಾಗಿದೆ. ಇಬ್ಬರೂ ಪರಿಚಿತರಾಗಿದ್ದು, ಬಹುವಚನದಲ್ಲೇ ಸಂಭಾಷಣೆ ನಡೆಸಿದ್ದಾರೆ. ಯಾವುದೇ ಕೆಟ್ಟ ಮಾತುಗಳು ವಿನಮಯವಾಗಿಲ್ಲ.

ಪುತ್ತಿಲ ಪರಿವಾರ ತೊರೆದು ಬಿಜೆಪಿ ಸೇರಿದ ಅನಂತರದ ರಾಜಕೀಯ ಬೆಳವಣಿಗೆಯ ಬಗ್ಗೆ ಇಲ್ಲಿ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ಪುತ್ತಿಲ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇದರರ್ಥ ಭವಿಷ್ಯದಲ್ಲಿ ಎಂಎಲ್‌ಎ ಟಿಕೆಟ್‌ ಸಿಗುವುದಿಲ್ಲ. ಇನ್ನೂ ಬ್ಯಾನರ್‌ ಕಟ್ಟಿಕೊಂಡೇ ಕೂರಬೇಕು ಹೇಳಿದ್ದು, ನಾನು ಆಶಾವಾದಿ, ನೋಡುವ ಯಾರ ಕಥೆ ಏನೂ ಅಂತಾ ಎಂದು ಉತ್ತರಿಸಲಾಗಿದೆ.

ಪಕ್ಷದ ಜವಾಬ್ದಾರಿ ಸಿಗದೆ ಕಚೇರಿಗೆ ಕಾಲಿಡಲ್ಲ ಎಂದೇಳಿ ನಾಚಿಕೆಗೆಟ್ಟಿದ್ದೀರಿ ಎಂದು ಮಹಿಳೆ ಹೇಳಿದ್ದು, ರಾಜಕೀಯ ಅಂದ್ರೆ ನಾಚಿಕೆ, ಮಾನ ಮರ್ಯಾದೆ ಎರಡೂ ಬಿಡಬೇಕು ಎಂಬ ಉತ್ತರ ಇನ್ನೊಂದು ಕಡೆಯಿಂದ ಬಂದಿದೆ. ಪುತ್ತಿಲ ಪರಿವಾರದ ಪ್ರಸನ್ನ ಮಾರ್ತ ಅವರಿಗೆ 2 ತಿಂಗಳ ಹಿಂದೆಯೇ ಸ್ಥಾನ ಮಾನ ಸಿಕ್ಕಿದೆ ಎಂದು ಮಹಿಳೆ ಹೇಳಿ ದಾಗ, ಅವರಿಗೆ ನಿರೀಕ್ಷೆ ಪಡೆಯದ ಅವಕಾಶ ಸಿಕ್ಕಿದೆ. 2 ತಿಂಗಳ ಹಿಂದೆ ಫಿಕ್ಸ್‌ ಆಗಿಲ್ಲ. ಅದು ನಿಮಗೆ ಹೇಳಿದವರು ಫಿಕ್ಸ್‌ ಮಾಡಿರಬಹುದು ಎಂದುತ್ತರಿಸಿದ್ದಾರೆ.

3.5 ಕೋಟಿ ರೂ. ಚರ್ಚೆ
ಆಶಾ ತಿಮ್ಮಪ್ಪ ಬಿಜೆಪಿ ಕ್ಯಾಂಡಿಡೇಟ್‌ ಆದ ಕಾರಣ ನಿಮಗೆ ಅಷ್ಟು ಓಟು ಸಿಕ್ಕಿತು. ಇನ್ನೂ ಮುಂದೆ ನಿಮಗೆ ಭವಿಷ್ಯ ಇಲ್ಲ ಎಂದಾಗ, ಭವಿಷ್ಯ ಇದ್ದಿದ್ದರೆ ಗೆಲ್ಲುತ್ತಿದ್ದೆ ಎಂದು ಪುತ್ತಿಲ ಎನ್ನಲಾದ ವ್ಯಕ್ತಿ ಉತ್ತರಿಸಿದಲ್ಲದೇ ಪುತ್ತಿಲ ಪಕ್ಷ ವಿರೋಧಿ ಎನ್ನುತ್ತಾರೆ. ಇಂತಹ ನೂರಾರು ಆರೋಪ ಮಾಡುತ್ತಾರೆ. 3.5 ಕೋ.ರೂ. ದುಡ್ಡು ಪಡೆದಿದ್ದಾರೆ ಎನ್ನುವ ಆರೋಪ ಹೊರಿಸಿದ್ರು ಎಂದಾಗ ಅದಕ್ಕುತ್ತರಿಸಿದ ಮಹಿಳೆ, ದುಡ್ಡು ಪಡೆದದ್ದು ನಿಜವಲ್ಲವೇ ಎಂದು ನಗುತ್ತಾ ಪ್ರಶ್ನಿಸುತ್ತಿರುವುದು ಕಂಡುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next